ದೊಡ್ಡಬಳ್ಳಾಪುರ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ (Operation Sindoora) ಮೂಲಕ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ಪ್ರತಿಕಾರ ತೀರಿಸಿಕೊಂಡಿದೆ.
ಇದರಿಂದ ಇಡೀ ಭಾರತ ದೇಶವೇ ಸಂತಸದಿಂದ ಭಾರತೀಯ ಸೇನೆಯನ್ನು ಕೊಂಡಾಡಿದೆ.
ದೇಶಭಕ್ತಿಯ ಉತ್ಸಾಹದಿಂದ ಪ್ರೇರಿತರಾಗಿ ಅನೇಕ ದಂಪತಿಗಳು ತಮ್ಮ ನವಜಾತ ಶಿಶುವಿಗೆ ಆಪರೇಷನ್ ಸಿಂಧೂರ ನಂತರ ‘ಸಿಂಧೂರಿ’ ಎಂದು ಹೆಸರಿಸಿಟ್ಟಿದ್ದಾರೆ.
ಅಂತೆಯೇ ದೊಡ್ಡಬಳ್ಳಾಪುರದ ಪ್ರಸಿದ್ಧ ಮಲ್ಲಿಗೆ ಆರ್ಟ್ ಮಾಲೀಕರಾದ ನಿತಿನ್, ಎ.ಎಲ್ ಮಲ್ಲಿಗೆ, ಕೀರ್ತನ ಟಿ.ಎಸ್ ದಂಪತಿಗಳು ತಮ್ಮ ಎರಡು ತಿಂಗಳ ಮಗು ಯುವನ್ ಎ.ಎನ್ಗೆ ಆಪರೇಷನ್ ಸಿಂಧೂರ ಕುರಿತದಾದ ವೇಷಭೂಷಣ ತೊಡಿಸಿ, ಫೋಟೋ ಶೂಟ್ ಮಾಡಿಸಿ, ಸಂಭ್ರಮಿಸಿದ್ದಾರೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶಭಕ್ತಿ ಪ್ರತಿಯೊಬ್ಬ ಭಾರತೀಯನನ್ನು ಹೇಗೆ ಮುಟ್ಟುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.