ದೊಡ್ಡಬಳ್ಳಾಪುರ: ಇಂದು ರಾಷ್ಟ್ರೀಯ ರೈತ ದಿನವಾಗಿದ್ದು (Farmers’ Day), ಅನ್ನದಾತ ರೈತರು ಭಾರತದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಎಲ್ಲಾ ಜವಾಬ್ದಾರಿಯುತ ರೈತರನ್ನು ಗೌರವಿಸಲು ಮತ್ತು ಪ್ರಶಂಸಿಸಲು ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತರ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಡಿಸೆಂಬರ್ 23ರ ದೇಶದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನ. ಅವರು ದೇಶದ ಅನ್ನದಾತರರಿಂದ ‘ಭಾರತೀಯ ರೈತರ ವೀರನಾಯಕ’ ಎಂಬ ವಿಶೇಷಣ ಪಡೆದಿದ್ದರು.
ಅವರ ರೈತರ ಪರ ಕಾಳಜಿ ಅಸಾಮಾನ್ಯವಾದದ್ದು. 2001ರಿಂದ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಚೌಧರಿ ಚರಣಸಿಂಗ್ ಅವರು ಹುಟ್ಟಿದ ದಿನವನ್ನು ದೇಶದಲ್ಲಿ ರಾಷ್ಟ್ರೀಯ ರೈತರ ದಿನವಾಗಿ ಆಚರಿಸಲಾಗುತ್ತದೆ.
ಸಮಾಜಕ್ಕೆ ರೈತರು ನೀಡಿದ ಅನನ್ಯ ಕೊಡುಗೆ ಸ್ಮರಿಸಲು ಹಾಗೂ ಅನ್ನದಾತರನ್ನು ಗೌರವಿಸುವ ಉದ್ದೇಶವನ್ನೂ ಈ ದಿನಾಚರಣೆ ಒಳಗೊಂಡಿದೆ.
ರಾಷ್ಟ್ರೀಯ ರೈತ ದಿನಾಚರಣೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕುಮಾರ್ ಎಂಬುವವರು ಜಮೀನಿನಲ್ಲಿ ಬೆಳೆದ ರಾಗಿಯನ್ನು ಕಣದಲ್ಲಿ ಸಂಗ್ರಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಅಲ್ಲದೆ ರೈತರೆಲ್ಲರಿಗೂ ಸಿಹಿ ತಿನಿಸುಗಳ ನೀಡಿ ಸಂಭ್ರಮಿಸಿದರು.