ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ನಡೆಸಲಾಗುತ್ತಿದ್ದ ರಘು ದೀಕ್ಷಿತ್ ( Raghu Dixit) ಅವರ ಸಂಗೀತ ಸಂಜೆ ವೇಳೆ ಕಿಡಿಗೇಡಿಗಳ ಉಪಟಳದಿಂದ ಬಾಲಕ ಕಾಲು ಮುರಿದಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಬಾಶೆಟ್ಟಿಹಳ್ಳಿಯ ವಾಸಿ ನಿಖಿಲ್ (12 ವರ್ಷ) ಕಾಲಿನ ಮೂಳೆ ಮುರಿತದಿಂದ ಗಾಯಗೊಂಡಿರುವ ಬಾಲಕನಾಗಿದ್ದು, ಪೋಷಕರೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಬಂದ ವೇಳೆ ದುರ್ಘಟನೆ ಸಂಭವಿಸಿದೆ.
ರಘು ದೀಕ್ಷಿತ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳ ಗುಂಪೊಂದು ಮದ್ಯಪಾನ ಮಾಡಿ, ಟೇಬಲ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ, ಮುಂಭಾಗದಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದು, ನಿಖಿಲ್ ಕಾಲಿನ ಗಂಭೀರ ಪೆಟ್ಟಾಗಿದೆ.
ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ವೇಳೆ ಕಾಲಿನ ಮೂಳೆ ಮುರಿದಿರುವುದು ಕಂಡುಬಂದಿದೆ ಎಂದು ಪೋಷಕ ನರಸಿಂಹ ಅಳಲು ತೋಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಠಾಣೆ ಈ ಕುರಿತಂತೆ ಮಾಹಿತಿ ನೀಡಲಾಗಿದೆ.