ಮಂತ್ರಾಲಯ: ಕ್ಷೇತ್ರದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಾನುವಾರ ನಡೆದ ಶ್ರೀ ಗುರುರಾಯರ ವೈಭವೋತ್ಸವದಲ್ಲಿ ಕುಟುಂಬ ಸಮೇತ ಭಾಗಿಯಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗುರುರಾಯರ ದರ್ಶನ ಪಡೆದರಲ್ಲದೆ, ತದ ನಂತರ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದವನ್ನು ಪಡೆದುಕೊಂಡರು.