ನವದೆಹಲಿ: ಪ್ರಿಪೇಯ್ಡ್ ಯೋಜನೆಗಳ ಅವಧಿ ಮುಗಿದಾಗ ಟೆಲಿಕಾಂ ಕಂಪನಿಗಳು (Telegram companies) ಒಳಬರುವ ಕರೆಗಳನ್ನು ನಿರ್ಬಂಧಿಸುವ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಸಂಸತ್ತಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಬೆಂಬಲ ದೊರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
🚨Raghav Chadha raised serious concerns in Parliament over telecom companies blocking incoming calls for users after recharge expiry
— Mr_Knowledge (@Mr_Knowledge064) February 22, 2026
While stopping outgoing calls due to low balance is understandable, cutting incoming services unfairly impacts poor, elderly, low-income people pic.twitter.com/4IyF2l2KBH
ಹೌದು ಭಾರದಲ್ಲಿ ಟೆಲಿಕಾಂ ಆಪರೇಟರ್ಸ್ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ಜನರನ್ನು ತನ್ನತ್ತ ಸೆಳೆಯುವ ಯತ್ನ ಮಾಡಿತ್ತು. ಇದೀಗ ಡೇಟಾ, ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಇಷ್ಟೇ ಅಲ್ಲ ಉಚಿತವಾಗಿ ನೀಡಿದ ಎಲ್ಲಾ ಯೋಜನೆಗಳ ಅಸಲು ಬಡ್ಡಿಯನ್ನು ಟೆಲಿಕಾಂ ಕಂಪನಿಗಳು ಮರಳಿ ಪಡೆಯುತ್ತಿದೆ.
ಈ ಪೈಕಿ ರೀಚಾರ್ಜ್ ಮಾಡದಿದ್ದರೆ, ಅದೇ ದಿನ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಕಮಿಂಗ್ ಕೂಡ ಕಡಿತಗೊಳ್ಳುತ್ತಿದೆ. ಈ ಕುರಿತಂತೆ ದನಿ ಎತ್ತಬೇಕಾದ ಕೇಂದ್ರ ಸರ್ಕಾರದ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಟ್ರಾಯ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ ಎಂಬ ಆಕ್ರೋಶ ಗ್ರಾಹಕರದ್ದು.
ರೀಚಾರ್ಜ್ ಮಾಡದಿದ್ದರೆ,ಅದೇ ದಿನ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಮಿಂಗ್ ಕೂಡ ಕಡಿತಗೊಳ್ಳುತ್ತಿದೆ. ಇದರ ವಿರುದ್ದ ಆಪ್ ಸಂಸದ ರಾಘವ್ ಚಡ್ಡಾ ಗಮನ ಸೆಳೆದಿದ್ದು, ವ್ಯಾಪಕ ಬೆಂಬಲ ದೊರೆಯುತ್ತಿದೆ.
राघव चड्ढा जिन मुद्दों को उठाते है
— ZUBAIR 🦁 (@Zubair99778) February 22, 2026
वो सीधे जनता से जुड़े होते है
फायदा भी जनता को होना तय हैं
राधव चढ़ा एक साफ सुथरी छवि के नेता है,ओर आधुनिकवाद पर राजनीति करते हैं, जनहित के मुद्दे ऊठाते है चाहें गिग वर्कर हों या एयरपोर्ट पर चाय-काफी की रेट का मुद्दा है, राइट टू रिकॉल का मुद्धा… pic.twitter.com/xvGgRMFVym
ಟೆಲಿಕಾಂ ಆಪರೇಟರ್ ವಿರುದ್ಧ ಮಾತನಾಡಿರುವ ರಾಘವ್ ಚಡ್ಡ, ಹಲವರು ತಮ್ಮ ಅಗತ್ಯದ ಸಂವಹನಕ್ಕಾಗಿ, ಉದ್ಯೋಗದ ಕಾರಣದಿಂದ ಮೊಬೈಲ್ ಬಳಸುತ್ತಾರೆ. ಬಡವರು ಹಲವು ಬಾರಿ ವ್ಯಾಲಿಟಿಡಿ ಮುಗಿದ ದಿನವೇ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಟೆಲಿಕಾಂ ಆಪರೇಟರ್ಸ್ ಅವರ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಕಮಿಂಗ್ ಕೂಡ ಕಟ್ ಮಾಡುತ್ತಿದೆ. ಇದು ಸರಿಯಲ್ಲ ಎಂದಿದ್ದಾರೆ.
ವ್ಯಾಲಿಟಿಡಿ ಮುಗಿದಾಗ, ರೀಚಾರ್ಜ್ ಅವಧಿ ಮುಗಿದಾಗ, ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದಾಗ ಔಟ್ ಗೋಯಿಂಗ್ ಕರೆಗಳನ್ನು ನಿರ್ಬಂಧಿಸುವುದರಲ್ಲಿ ಅರ್ಥವಿದೆ. ಆದರೆ ಇನ್‌ಕಮಿಂಗ್ ಕರೆ, ಮೆಸೇಜ್ ಎಲ್ಲವನ್ನೂ ತಡೆಯುವುದು ಏಕೆ. ಭಾರತದಲ್ಲಿ ಮೊಬೈಲ್ ನಂಬರ್ ಆಧಾರ್ ಕಾರ್ಡ್, ಬ್ಯಾಂಕ್ ಸೇರಿದಂತೆ ಎಲ್ಲಾ ಸರ್ಕಾರಿ ಯೋಜನೆಗಳ ಜೊತೆ ಲಿಂಕ್ ಆಗಿರುತ್ತದೆ. ಇನ್‌ಕಮಿಂಗ್ ತಡೆ ಹಿಡಿಯುವುದರಿಂದ ಅವರಿಗೆ ಒಟಿಪಿ ಸೇರಿದಂತೆ ಇತರ ಅಗತ್ಯ, ತುರ್ತು ಸೇವೆಗಳು ಲಭ್ಯವಾಗುವುದಿಲ್ಲ ಎಂದು ರಾಘವ್ ಚಡ್ಡ ಹೇಳಿದ್ದಾರೆ.
ಭಾರತದಲ್ಲಿ ಟೆಲಿಕಾಂ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿ ಬಹುತೇಕ ಮೊಬೈಲ್ ಅವಿಭಾಜ್ಯ ಅಂಗವಾಗಿದೆ. ಸರ್ಕಾರದ ಎಲ್ಲಾ ದಾಖಲೆಗಳಿಗೆ ಮೊಬೈಲ್ ನಂಬರ್ ನೀಡಬೇಕು. ಹೀಗಿರುವಾಗ ಇನ್‌ಕಮಿಂಗ್ ಕರೆ, ಮೆಸೇಜ್ ಕರ್ ಮಾಡುವ ಪದ್ಧತಿ ಯಾಕೆ, ಟೆಲಿಕಾಂ ಆಪರೇಟರ್ಸ್ ಲಾಭದ ಮೇಲೆ ಕಣ್ಣಿಟ್ಟಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ರಾಘವ್ ಚಡ್ಡ ಎತ್ತಿದ ಈ ಪ್ರಶ್ನೆಗಳಿಗೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಟೆಲಿಕಾಂ ಆಪರೇಟರ್‌ಗಳು ಆಡಿದ್ದೇ ಆಟವಾಗಿದೆ. ಅಧಿಪತ್ಯ ಸಾಧಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಟೆಲಿಕಾಂ ಆಪರೇಟರ್‌ಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಒತ್ತಾಯ ಕೇಳಿಬಂದಿದೆ.