ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಭಾಗಿತ್ವದಲ್ಲಿ ಉಪವಿಭಾಗ ಅಧಿಕಾರಿಗಳು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007ರ ಅಡಿಯಲ್ಲಿ ಶುಕ್ರವಾರ ಲೋಕ್ ಅದಾಲತ್ನಲ್ಲಿ (Lok Adalat) ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ಲೋಕ್ ಅದಾಲತ್ ಕುರಿತು ಮಾಹಿತಿ ನೀಡಿದ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007ರ ಅಡಿಯಲ್ಲಿ 43 ಪ್ರಕರಣಗಳು ದಾಖಲಾಗಿವೆ. ಮಕ್ಕಳು ಹಿರಿಯನ್ನು ಸಾಕಿ ಸಲಹುವುದು ಕರ್ತ್ಯವಾಗಿದೆ. ಆದರೆ ಪೋಷಕರಿಂದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಪೋಷಕರನ್ನು ಪೋಷಣೆ ಮಾಡುವ ಕರ್ತವ್ಯದಿಂದ ನುಣುಚಿಕೊಂಡರೆ ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007 ಅಡಿಯಲ್ಲಿ ಪೋಷಕರು ತಮ್ಮ ಆಸ್ತಿಯನ್ನು ಮರಳಿ ತಮ್ಮ ಹೆಸರಿಗೆ ಪಡೆಯುವ ಅವಕಾಶ ಇದೆ.
ಹಿರಿಯರ ಆರೋಗ್ಯ ಮತ್ತು ಇತರೆ ಸೌಲಭ್ಯಗಳನ್ನು ನೋಡಿಕೊಳ್ಳ ಈ ನಿಟ್ಟಿಯಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಹಾಗೂ ಪ್ರಕರಣದಲ್ಲಿನ ಉಭಯ ಕಕ್ಷಿದಾರರಿಗೂ ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಕಾನೂನು ಸೇವಾ ಸಮಿತಿಯಿಂದ ನೇಮಿಸಲಾದ ವಕೀಲರ ಸಮ್ಮುಖದಲ್ಲಿ ಅದಾಲತ್ನಲ್ಲಿ ಅವಕಾಶ ನೀಡಲಾಗಿತ್ತು. ಇವುಗಳ ಪೈಕಿ ಮೂರು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.
ಲೋಕ್ ಅದಾಲತ್ ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರಾದ ಟಿ.ಉಮೇಶ್ ಇದ್ದರು.