ದೊಡ್ಡಬಳ್ಳಾಪುರ: ನಗರದಲ್ಲಿನ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರಿಗೆ ನೀಡುತ್ತಿರುವ ಬೆಲೆ ಪಟ್ಟಿಗಳು ಆಂಗ್ಲ ಭಾಷೆಯಲ್ಲಿದ್ದು,ಕನ್ನಡ ಭಾಷೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಕಾರ್ಯಕರ್ತರು ದೂರಿದ್ದಾರೆ.
ನಗರದ ವಾಣಿಜ್ಯ ಮಳಿಗೆಗಳಾದ ಡಿ ಮಾರ್ಟ್, ಸ್ಮಾರ್ಟ್ ಪಾಯಿಂಟ್ ಹಾಗೂ ರಿಲಯನ್ಸ್ ಟ್ರೆಂಡ್ಸ್‍ನ ಮಾಲೀಕರಿಗೆ ಈ ಕುರಿತು ಮನವಿ ಸಲ್ಲಿಸಿ, ಮಾತನಾಡಿದ ಕರವೇ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಗ್ರಾಹಕರಿಗೆ ನೀಡುತ್ತಿರುವ ಬೆಲೆ ಪಟ್ಟಿ ಆಂಗ್ಲ ಭಾಷೆಯಲ್ಲಿದೆ. ಇದರಿಂದ ಗ್ರಾಹಕರಿಗ ತಾವು ಕೊಂಡಿರುವ ವಸ್ತುಗಳು ಹಾಗೂ ಅದರ ಬೆಲೆಗಳು ನಿಖರವಾಗಿ ತಿಳಿಯುತ್ತಿಲ್ಲ. ಸರ್ಕಾರ ಸ್ಥಳೀಯ ಭಾಷೆಗಳಲ್ಲಿ ವ್ಯವಹಾರ ಮಾಡಬೇಕೆಂದು ನಿಯಮ ರೂಪಿಸಿದ್ದರೂ ಜಾರಿಗೆ ಬರುತ್ತಿಲ್ಲ. ಕೂಡಲೇ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಿದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ಅಪ್ಪಣ್ಣ. ಹೋಬಳಿ ಅಧ್ಯಕ್ಷ ಕಾಂತ. ವೀರಭದ್ರ. ಶಿವಶಂಕರಪ್ಪ. ವಾಸು. ಗಣೇಶ್. ಜಯರಾಮ್ ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.