ದೊಡ್ಡಬಳ್ಳಾಪುರ: ಬ್ಲಾಕ್ ಫಂಗಸ್ ಆತಂಕದಿಂದ ನೇಣಿಗೆ ಶರಣಾದ, ವಿದ್ಯಾನಗರದ ರವೀಂದ್ರ ಕುಟುಂಬಕ್ಕೆ ಬಿಜೆಪಿ ಮುಖಂಡ ಧೀರಜ್ ಮುನಿರಾಜು ಆರ್ಥಿಕ ನೆರವನ್ನು ನೀಡಿ, ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಸೋಂಕಿಗೆ ಆತ್ಮಹತ್ಯೆ ಪರಿಹಾರವಲ್ಲ, ಇತ್ತೀಚಿನ ದಿನಗಳಲ್ಲಿ ಸೋಂಕುಗಳು ಇಡೀ ವಿಶ್ವವನ್ನೆ ಕಾಡುತ್ತಿವೆ. ಇವುಗಳ ಚಿಕಿತ್ಸೆಗೆ ಸರ್ಕಾರಗಳು ಬಹಳಷ್ಟು ಶ್ರಮಿಸುತ್ತಿದೆ. ರೋಗ ಬಂದ ಕೂಡಲೇ ಆತಂಕಕ್ಕೆ ಒಳಗಾಗದೇ ವೈದ್ಯರ ಸಲಹೆ ಸೂಚನೆ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದವರು ಸಹಸ್ರ ಸಂಖ್ಯೆಯಲ್ಲಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಗೆ ಬದ್ದವಾಗಿದೆ. ಆದರೆ ಏಕಾಏಕಿ ಸೋಂಕುಗಳು ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿಯಾಗಿ ಪರಿಸ್ಥಿತಿಗೆ ಕಾರಣವಾಗಿತ್ತು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಸಾರ್ವಜನಿಕರು ಯಾವುದೇ ಸೋಂಕಿಗೆ ಒಳಗಾದಾಗ, ಆತಂಕಕ್ಕೆ ಒಳಗಾಗಿ ಇಂತಹ ಪ್ರಮಾದಗಳನ್ನು ಮಾಡಿಕೊಳ್ಳಬಾರದೆಂದು ಇದೇ ವೇಳೆ ಧೀರಜ್ ಮುನಿರಾಜು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ರಾಜಣ್ಣ, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ವತ್ಸಲ, ಬಿಜೆಪಿ ಮುಖಂಡರಾದ ಲೀಲಾ ಮಹೇಶ್, ನಗರಸಭೆ ಮಾಜಿ ಸದಸ್ಯ ಎನ್.ಕೆ.ರಮೇಶ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಕೋಷ್ಟ ಸಹಸಂಚಾಲಕ ಬಂತಿ ವೆಂಕಟೇಶ್, ಯುವ ಮುಖಂಡ ಡಿ.ಪಿ.ಲೋಕೇಶ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….