ಬೆಂಗಳೂರು: ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಬಂದಾಗಿದ್ದ ಶಾಲೆ ಆರಂಭಕ್ಕೆ ಗ್ನಿನ್ ಸಿಗ್ನಲ್ ಸಿಕ್ಕಿದೆ. ಆಗಸ್ಟ್ 23 ರಿಂದ 9, 10ನೇ ತರಗತಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
9 ಮತ್ತು 10ನೇ ತರಗತಿಗಳು ಸದ್ಯಕ್ಕೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ನಡೆಯುತ್ತವೆ. ಶಾಲೆಗೆ ಹಾಜರಾಗಲು ವಿದ್ಯಾರ್ಥಿಗಳು ಪೋಷಕರಿಂದ ಸಮ್ಮತಿ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.
ಈ ಮೊದಲೇ ಶಿಕ್ಷಣ ಸಚಿವರು ಹೇಳಿದಂತೆ ಕರೊನಾ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಶಾಲೆಗಳು ಆರಂಭವಾಗಲಿದೆ.
ಮಾರ್ಗಸೂಚಿ: ಮತ್ತು 10ನೇ ತರಗತಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಲಾಗಿದೆ. ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯ ಜತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ. ಆನ್ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ. ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ನಡೆಯಲಿದೆ. ಶನಿವಾರ ಮಾತ್ರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ, 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು, ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕಿದೆ.
ಉಳಿದಂತೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಶಾಲೆ ಪ್ರವೇಶ ಮಾರ್ಗದದಲ್ಲಿ ಕನಿಷ್ಠ 3 ರಿಂದ 6 ಅಡಿ ಅಂತರದಲ್ಲಿ ವೃತ್ತ ಹಾಕಬೇಕು, ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು, ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು, ಶಿಕ್ಷಕರು ಕನಿಷ್ಠ ಒಂದು ಸಾರಿಯಾದರೂ ಲಸಿಕೆ ಪಡೆದುಕೊಂಡಿದ್ದಾರೆಯೇ? ಎಂಬುದನ್ನು ತಿಳಿಸಬೇಕು, ಕರೊನಾ ನಿಯಮಗಳು ಪಾಲನೆಯಾಗುತ್ತ ಇದೆಯೇ? ಇಲ್ಲವೇ? ಎಂಬುದರ ಮೇಲ್ವಿಚಾರಣೆ ನೋಡಲ್ ಅಧಿಕಾರಿಯ ಜವಾಬ್ದಾರಿ, ಎಸ್ಡಿಎಂಸಿ ಸಮಿತಿ ಜತೆ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ನಡೆಸಬೇಕು ಎಂಬ ನಿಯಮಗಳನ್ನು ತಿಳಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……