ದೊಡ್ಡಬಳ್ಳಾಪುರ, (ಜುಲೈ.18): ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕೆಎಸ್ಆರ್ಟಿಸಿ ಬಸ್ ಬರುತ್ತಿಲ್ಲ. ಇದರಿಂದ ತರಗತಿಗಳಿಗೆ ಹೋಗಲು ಪ್ರತಿದಿನವು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಶಾಲೆ, ಕಾಲೇಜು ಆರಂಭವಾದ ಒಂದು ತಿಂಗಳಿಂದ ಈಚೆಗೆ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಈ ನಿಟ್ಟಿನಲ್ಲಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ಬಸ್ ಸಮಸ್ಯೆ ಕುರಿತಂತೆ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಕುಂದು ಕೊರತೆ ಸಭೆ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆ ಅನಾವರಣಕ್ಕೆ ವೇದಿಕೆಯಾಯಿತು.
ಸಮಯಕ್ಕೆ ಬಾರದ ಬಸ್ಗಳು, ಸೌಜನ್ಯದಿಂದ ವರ್ತಿಸದ ಸಿಬ್ಬಂದಿ ಹಾಗೂ ಗುಜರಿ ಸೇರಬೇಕಿರುವ ಬಸ್ಗಳು ಮಾರ್ಗ ಮಧ್ಯದಲ್ಲೇ ಕೆಟ್ಟು ನಿಲ್ಲುವ ಕುರಿತಂತೆ ಪ್ರಯಾಣಿಕರು ತಮ್ಮ ದೂರುಗಳನ್ನು ಶಾಸಕರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.
“ಒಂದು ದಿನವು ನಿಗದಿತ ಸಮಯಕ್ಕೆ ಬಸ್ಗಳು ಬಂದಿರುವ ನಿದರ್ಶನವೇ ಇಲ್ಲ. ಈ ಬಗ್ಗೆ ಚಾಲಕರು, ನಿರ್ವಾ- ಹಕರನ್ನು ಪ್ರಶ್ನೆ ಮಾಡಿದರೆ ಏಕವ ಚನದಲ್ಲಿ ಉತ್ತರ ನೀಡುತ್ತಾರೆ. ಬಸ್ ನಿಲ್ದಾಣದಲ್ಲಿನ ಸಂಚಾರ ನಿಯಂತ್ರಣ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ, ಯಾವುದೇ ಉತ್ತರವು ನೀಡಿಲ್ಲ. ನಗರದಲ್ಲಿನ ಕಾಲೇಜುಗಳಿಗೆ ಹೋಗದೆ ಚಿಕ್ಕಬಳ್ಳಾಪುರಕ್ಕೆ ಏಕೆ ಬರುತ್ತೀರಿ ಎಂದು ನಿರ್ವಾಹಕರು ಪ್ರಶ್ನೆ ಮಾಡುತ್ತಾರೆ’ ಎಂದು ಚಿಕ್ಕಬಳ್ಳಾಪು-ರದಲ್ಲಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ಹೋಗುವ ದೊಡ್ಡಬಳ್ಳಾ- ಪುರ ನಗರದ ವಿದ್ಯಾರ್ಥಿನಿ ಪೂರ್ಣಿಮಾ ಸಮಸ್ಯೆ ಹೇಳಿಕೊಂಡರು.
ನಾವು ಎಲ್ಲಿ ಓದಬೇಕು ಎಂದು ಹೇಳುವ ಅಧಿಕಾರ ಇವರಿಗೆ ನೀಡಿದವರು ಯಾರು?, ನಗರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ಎರಡು ಮಾರ್ಗಗಳು ಇವೆ. ಇಂತಹದ್ದೇ ಮಾರ್ಗದಲ್ಲಿ ಹೋಗಿ ಎಂದು ಹೇಳುವ ಅಧಿಕಾರಿ ನೀಡಿವರು ಯಾರು’ ಎಂದು ಪ್ರಶ್ನಿಸಿದರು.
ಯಾವ ಮಾರ್ಗದ ಬಸ್ನಲ್ಲಿ ಸೀಟ್ಗಳು ಖಾಲಿ ಇದ್ದರೆ ಅವುಗಳಲ್ಲಿ ನಮಗೆ ಪ್ರಯಾಣ ಮಾಡಲು ಹಾಗೂ ಹೆಚ್ಚುವರಿ ಬಸ್ಗಳ ಸಂಚಾರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಮಾರ್ಗದಲ್ಲಿ ದಶಕಗಳಿಂದ ಸಂಚರಿಸುತ್ತಿದ್ದ. ಬಸ್ ಸ್ಥಗಿತಗೊಳಿಸ ಲಾಗಿದೆ. ಇದರಿಂದ ಈ ಮಾರ್ಗದ ಹತ್ತಾರು ಗ್ರಾಮಗಳ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಮಾರ್ಗದಲ್ಲಿ ಮತ್ತೆ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ಹಾದ್ರಿಪುರ ಗ್ರಾಮದ ಪ್ರಯಾಣಿಕ ಪುಟ್ಟಸ್ವಾಮಿ ಆಚಾರ್ ಮನವಿ ಮಾಡಿದರು.
ತಾಲ್ಲೂಕು ಕೇಂದ್ರದಿಂದ ಸಾಸಲು ಹೋಬಳಿಯ ಕೊಟ್ಟಿಗೆಮಂಚೇನ- ಹಳ್ಳಿ, ಲಿಂಗಧೀರನಹಳ್ಳಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಧೀರಜ್ ಮುನಿರಾಜು ವಿಧಾನಸಭಾ ಅಧಿವೇಶನ ಮುಕ್ತಾಯವಾದ ನಂತರ ಗ್ರಾಮೀಣ ಭಾಗದ ಹಾಗೂ ಬೆಂಗಳೂರಿನ ಕಾವೇರಿನ ಭವನ-ದೊಡ್ಡಬಳ್ಳಾಪುರ ಮಾರ್ಗದ ಬಸ್ಗಳಲ್ಲಿ ಸಂಚರಿಸುವ ಮೂಲಕ ಸಮಸ್ಯೆ ಅರಿತುಕೊಳ್ಳಲಾ- ಗುವುದು ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ತಾಲೂಕಿನಲ್ಲಿ ಬಸ್ಗಳ ಸಮಸ್ಯೆ ಇಲ್ಲದಿದ್ದರೂ ಬಸ್ ಚಾಲಕರು, ನಿರ್ವಾಹಕರು ಕೊರತೆಯೇ ಸಮಸ್ಯೆಗೆ ಕಾರಣವಾಗಿದ್ದು, ಒಟ್ಟು 37 ಮಂದಿ ಕೊರತೆ ಇರುವುದರಿಂದ ಸಮಸ್ಯೆ ತೀವ್ರವಾಗಲು ಕಾರಣ ಎಂಬ ಮಾಹಿತಿ ಹರಿತಲೇಖನಿಗೆ ಲಭ್ಯವಾಗಿದೆ.
ಈ ಕುರಿತಂತೆ ಡಿಪೋ ವ್ಯವಸ್ಥಾಪಕ ಸಂತೋಷ್ ಮಾಹಿತಿ ನೀಡಿದ್ದು, ದೊಡ್ಡಬಳ್ಳಾಪುರ ಡಿಪೋದಲ್ಲಿ 76 ಮಾರ್ಗಗಳಿದ್ದು, 238 ಸಿಬ್ಬಂದಿಗಳ ಅಗತ್ಯವಿದೆ. ಆದರೆ 20 ಮಂದಿ ಕೊರತೆ ಇರುವ ಜೊತೆಗೆ ವಿವಿಧ ಕಾರಣಗಳಿಂದ 17 ಮಂದಿ ಹೆಚ್ಚುವರಿಯಾಗಿ ಅಲಭ್ಯರಾಗುತ್ತಿದ್ದು ಒಟ್ಟು 37 ಮಂದಿ ಕೊರತೆಯಿರುವ ಕಾರಣ ಪ್ರತಿ ನಿತ್ಯ ಎರಡರಿಂದ ಮೂರು ಮಾರ್ಗವನ್ನು ರದ್ದು ಮಾಡಲಾಗುತ್ತಿದೆ ಎಂದಿದ್ದಾರೆ.
ಚಾಲನಾ ಸಿಬ್ಬಂದಿ ಕೊರತೆ ಕುರಿತಂತೆ ಹಿರಿಯ ಅಧಿಕಾರಿಗಳ ಗಮನದಲ್ಲಿದ್ದು, ಮುಂದಿನ 15 ದಿನಗಳ ಒಳಗಾಗಿ ಚಾಲನಾ ಸಿಬ್ಬಂದಿ ನೀಡುವ ಬಗ್ಗೆ ಈಗಾಗಲೇ ಚರ್ಚೆ ನಡೆದಿರುವ ಕಾರಣ ಪ್ರಸ್ತುತ ಕಾಡುತ್ತಿರುವ ಸಮಸ್ಯೆ ಪರಿಹಾರವಾಗುತ್ತದೆ ಎಂದು ಡಿಪೋ ವ್ಯವಸ್ಥಾಪಕ ಸಂತೋಷ್ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….