ನವದೆಹಲಿ, (ಜುಲೈ ,18): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್ನಲ್ಲಿರುವ ವೀರ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಎನ್ಐಟಿಬಿ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವರ್ಚುವಲ್ ಉದ್ಘಾಟನೆ ಮಾಡಿದರು.
ಈ ಭವ್ಯ ನಿಲ್ದಾಣವನ್ನು ಇಂದು ಪ್ರಧಾನಿ ಮೋದಿ ವರ್ಚುವಲ್ ಉದ್ಘಾಟನೆ ಮಾಡಿದ್ದು, ಈ ವಿಶೇಷ ಕಟ್ಟಡವು ಶೆಲ್ ಆಕಾರದಲ್ಲಿದ್ದು, ದ್ವೀಪಗಳ ನೈಸರ್ಗಿಕ ಪರಿಸರವನ್ನು ಚಿತ್ರಿಸುತ್ತದೆ. ಇಡೀ ಟರ್ಮಿನಲ್ ದಿನಕ್ಕೆ 12 ಗಂಟೆಗಳ ಕಾಲ ಶೇ.100 ಪ್ರತಿಶತ ನೈಸರ್ಗಿಕ ಬೆಳಕನ್ನು ಹೊಂದಿರುತ್ತದೆ, ಇದನ್ನು ಛಾವಣಿಯ ಮೇಲೆ ಸ್ಕೈಲೈಟ್ಗಳ ಮೂಲಕ ಸಾಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ರೂ.710 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸೌಲಭ್ಯವು ಕೇಂದ್ರಾಡಳಿತ ಪ್ರದೇಶವಾದ ದ್ವೀಪಕ್ಕೆ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಟರ್ಮಿನಲ್ ಕಟ್ಟಡವನ್ನು ಸುಮಾರು 40,800 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ರೂ.80 ಕೋಟಿ ವೆಚ್ಚದಲ್ಲಿ ಎರಡು ಬೋಯಿಂಗ್-767-400 ಮತ್ತು ಎರಡು ಏರ್ಬಸ್ -321 ಮಾದರಿಯ ವಿಮಾನಗಳಿಗೆ ಸೂಕ್ತವಾದ ರನ್ವೇ ಅನ್ನು ಸಹ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಒಂದೇ ಬಾರಿಗೆ 10 ವಿಮಾನಗಳನ್ನು ನಿಲ್ಲಿಸಬಹುದಾಗಿದೆ ಎಂದು ಪಿಎಂಒ ವಿವರಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….