ಮಿತ್ರರೇ, ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ನಾವು ದೇಶ-ಕಾಲಕಥನ ಮಾಡುತ್ತೇವೆ. ಅದರಲ್ಲಿ ಕಲ್ಪ, ಮನ್ವಂತರ, ಯುಗ, ಮಹಾಯುಗ ಮುಂತಾದ ಅನೇಕ ರೀತಿಯಲ್ಲಿ ಆ ದಿನದ ಉಲ್ಲೇಖ ಮಾಡುತ್ತೇವೆ. ಹಿಂದೂ ಕಾಲಗಣನೆಯ ಮಹಾತ್ಮೆಯನ್ನು ತಿಳಿದುಕೊಳ್ಳೋಣ.
ಅ. ನಾಲ್ಕು ಯುಗಗಳು
ಸತ್ಯಯುಗ = 17 ಲಕ್ಷ 28 ಸಾವಿರ ವರ್ಷಗಳು.
ತ್ರೇತಾಯುಗ = 12 ಲಕ್ಷ 96 ಸಾವಿರ ವರ್ಷಗಳು.
ದ್ವಾಪರಯುಗ = 8 ಲಕ್ಷ 64 ಸಾವಿರ ವರ್ಷಗಳು.
ಕಲಿಯುಗ = 4 ಲಕ್ಷ 32 ಸಾವಿರ ವರ್ಷಗಳು.
ಆ. ಮಹಾಯುಗ (ಚತುರ್ಯುಗ) = ನಾಲ್ಕು ಯುಗಗಳು ಸೇರಿ = 43 ಲಕ್ಷ 20 ಸಾವಿರ ವರ್ಷಗಳು
ಇ. ಮನ್ವಂತರ = 71 ಮಹಾಯುಗಗಳು
ಈ. ಕಲ್ಪ = 14 ಮನ್ವಂತರ ಅಥವಾ 1000 ಮಹಾಯುಗಗಳು
14 ಮನ್ವಂತರ (1000 ಮಹಾಯುಗಗಳು) = 4 ಅಬ್ಜ 32 ಕೋಟಿ ವರ್ಷಗಳು (4,32,00,00,000)
3. ಒಂದು ಕಲ್ಪವೆಂದರೆ ಬ್ರಹ್ಮ ದೇವರ ಒಂದು ದಿನ ಅಥವಾ ಒಂದು ರಾತ್ರಿ ಇಂತಹ 360 ದಿನ ಮತ್ತು 360 ರಾತ್ರಿ = ಬ್ರಹ್ಮದೇವರ ಒಂದು ವರ್ಷ
ಬ್ರಹ್ಮದೇವರ ಜೀವನ = ಮೇಲೆ ನೀಡಿದಂತೆ 100 ವರ್ಷಗಳು
ಬ್ರಹ್ಮದೇವರ ಜೀವನದ 50 ವರ್ಷಗಳು = ವಿಷ್ಣುವಿನ ಒಂದು ಕ್ಷಣ
ವಿಷ್ಣುವಿನ 12 ಲಕ್ಷ ಕ್ಷಣಗಳು = ಮಹೇಶ್ವರನ ಅರ್ಧ ಸಮಯ ಇದಾದ ನಂತರ ನೂತನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರ ನಿರ್ಮಾಣವಾಗುತ್ತದೆ
3. ಈಗ ಬ್ರಹ್ಮದೇವರ 50 ವರ್ಷಗಳು ಪೂರ್ಣವಾಗಿವೆ ಅಂದರೆ ಒಂದು ಪರಾರ್ಧ ಮುಕ್ತಾಯಗೊಂಡಿದೆ.
ಅ. ಈಗ 51ನೆ ವರ್ಷದ ಮೊದಲನೇ ದಿನ ಅಂದರೆ ಶ್ವೇತವರಾಹ ಕಲ್ಪ ಪ್ರಾರಂಭವಾಗಿದೆ
ಆ. ಈ ಶ್ವೇತವರಾಹ ಕಲ್ಪದ 6 ಮನ್ವಂತರಗಳು ಕಳೆದು, 7ನೆ ಮನ್ವಂತರ (ವೈವಸ್ವತ) ನಡೆಯುತ್ತಿದೆ.
ಇ. ವೈವಸ್ವತ ಮನ್ವಂತರದಲ್ಲಿ 71 ಮಹಾಯುಗಗಳು ಇವೆ. ಇದರಲ್ಲಿ 27 ಮಹಾಯುಗಗಳು ಪೂರ್ಣಗೊಂಡಿದ್ದು, 28ನೆ ಮಹಾಯುಗ ನಡೆಯುತ್ತಿದೆ. ಈ ಮಹಾಯುಗದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಪೂರ್ಣಗೊಂಡಿದ್ದು, ಕಲಿಯುಗ ನಡೆಯುತ್ತಿದೆ.
ಈ. ಕಲಿಯುಗದ ಮೊದಲನೇ ಚರಣ ನಡೆಯುತ್ತಿದೆ.
ಕೃಪೆ: ಡಾ.ಗೌತಮ್ ಗೋಳೇ, ಹಿಂದೂ ಜಾಗೃತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….