ಬೆಂಗಳೂರು, (ಆ.28): ಅಭಿಮಾನಿಗಳಿಗೆ ನಟ ದರ್ಶನ್ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಯನ್ನ ಕೊಡ್ತಿದ್ದಾರೆ. ಮಾಧ್ಯಮಗಳ ನಡುವಿನ ಜಟಾಪಟಿ ಪರಿಹಾರದ ಬೆನ್ನಲ್ಲೇ, ಮೊನ್ನೆ ಸಂಸದೆ ಸುಮಲತಾ ಅಂಬರೀಶ್ ಜನ್ಮದಿನ ಆಚರಣೆ ವೇಳೆ ದರ್ಶನ್ ಹಾಗೂ ಸುದೀಪ್ 06 ವರ್ಷಗಳ ಬಳಿಕ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ.
ಕುಚಿಕು ಗೆಳೆಯರು ದೂರವಾದ ಮೇಲೆ ಯಾವುದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಕೋಟ್ಯಾಂತರ ಅಭಿಮಾನಿಗಳು ಇವರಿಬ್ಬರು ಮತ್ತೆ ಒಂದಾಗ್ಗೇಕು ಎಂದು ಪ್ರಾರ್ಥಿಸುತ್ತಿದ್ದಾರೆ.
ಶನಿವಾರ ಇಬ್ಬರು ಒಟ್ಟಿಗೆ ಒಂದೇ ವೇದಿಕೆ ಮೇಲಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಇವರಿಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.
ಇವರಿಬ್ಬರ ನಡುವೆ ಸುಮಲತಾ ಸಂಧಾನ ಮಾಡಿಸಿದ್ದಾರೆ. ಇವರು ಮತ್ತೆ ಒಂದಾಗ್ತಾರೆ ಎಂದೆಲ್ಲ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ದರ್ಶನ್ ಮಾಡಿರುವ ಪೋಸ್ಟ್ ಮತ್ತಷ್ಟು ಕುತೂಹಲ ಹುಟ್ಟಿಹಾಕಿದೆ.
ಜೋಡೆತ್ತುಗಳನ್ನು ಹಿಡಿದುಕೊಂಡಿರುವ ಫೋಟೋವನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾಗಳನ್ನ ಅಪ್ಲೋಡ್ ಮಾಡಿ ‘ಕಾಲಾಯ ತಸ್ಯೆ ನಮಃ’ ಎಂಬ ಸಾಲುಗಳನ್ನು ಬರೆದಿದ್ದಾರೆ.
ಇದು ಕಿಚ್ಚ ಸುದೀಪ್ ಮತ್ತು ದರ್ಶನ್ ಒಂದಾಗುವ ಕಾಲ ಸಮೀಪ ಬಂದಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಪೋಸ್ಟ್ ಮಾಡಿರುವ ಜೋಡೆತ್ತುಗಳ ಫೋಟೋ ಇದಕ್ಕೆ ಪುಷ್ಟಿ ಕೊಟ್ಟಂತೆ ಇದೆ. ಇದಕ್ಕಾಗಿ ಫ್ಯಾನ್ಸ್ ವಿಧ ವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ.
ಇದು ನೀವು ಸುದೀಪ್ ಒಂದಾಗೋ ಸೂಚನೆ ಅಂದೊಳೀವಿ ಬಾಸ್, ಕಿಚ್ಚ ದಚ್ಚು ನೋಡಲು ಯಾರ್ಯಾರು ಕಾಯ್ತಿದ್ದೀರಾ ?, ದಚ್ಚು- ಕಿಚ್ಚ ಜೋಡೆತ್ತು. ಸಿಂಪಲ್ ಆಗಿ ಸುಳಿವು ಕೊಟ್ಟ ಬಾಸ್ ಇವತ್ತು ಏನೋ ಸ್ಪೆಷಲ್ ಇದೆ ಕಾಯ್ದಿರಿ, ಸರಳವಾಗಿ ಸರ್ಪೈಸ್ ಕೊಟ್ಟ ಬಾಸ್ ಎಂದು ಸಾಲು ಸಾಲು ಕಮೆಂಟ್ಸ್ ಮಾಡಿ ಅಭಿಮಾನಿಗಳು ಖುಷಿ ವ್ಯಕ್ತ ಪಡೆಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….