ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದ ಮೂರು ವರ್ಷದ ಬಾಲಕ ನೀರಿನ ತೊಟ್ಟಿಗೆ ಬಿದ್ದು ಸಾವಿಗೀಡಾದ ಘಟನೆ (crime news) ಶುಕ್ರವಾರ ಸಂಜೆ ನಡೆದಿದೆ.
ಶಿಕಾರಿಪುರ ತಾಲೂಕಿನ ಮತ್ತಿಕೋಟೆ ಗ್ರಾಮದ ನಿವಾಸಿ ಇಮ್ರಾನ್ ಎಂಬುವರ ಪುತ್ರ ಮಹಮ್ಮದ್ ಐಯಾನ್ ಮೃತ ಬಾಲಕ.
ಇಮ್ರಾನ್ ಸಂಬಂಧಿಕರು ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಗು ಬಂದಿದ್ದು, ಆಟವಾಡುತ್ತಾ ಆಸ್ಪತ್ರೆ ಹೊರಗೆ ಬಂದು ತೊಟ್ಟಿಗೆ ಬಿದ್ದಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇದನ್ನೂ ಓದಿ: crime news: ಗಂಡ-ಹೆಂಡತಿ ಜಗಳದಲ್ಲಿ ಮಗು ಬಲಿ..!
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತೊಟ್ಟಿಗೆ ಮುಚ್ಚಳ ಮುಚ್ಚದಿದ್ದ ಪರಿಣಾಮ ಮಗು ತೊಟ್ಟಿಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.