ಚಿಕ್ಕಬಳ್ಳಾಪುರ; ಬೆಳ್ಳೊಳ್ಳಿಗೆ ಭಾರೀ ಬೆಲೆ ಹಿನ್ನಲೆ, ನಗರದ ಮಾರುಕಟ್ಟೆಗೆ ಬಂದಿದ್ದ ಕಿರಾತಕರು ಬೆಳ್ಳುಳ್ಳಿ ಕಳ್ಳತನ (garlic theft) ಮಾಡಿಕೊಂಡು ಹೋದ ಘಟನೆ ವರದಿಯಾಗಿದೆ.
ಚಿಕ್ಕಬಳ್ಳಾಪುರದ ಸಂತೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿ ನೆಪದಲ್ಲಿ ಹತ್ತು ಕೆ.ಜಿ ಯ 6 ಕವರ್ ಗಳನ್ನು ಮಾಡಿಸಿ, 60 ಕೆ.ಜಿ ಬೆಳ್ಳುಳ್ಳಿ ಕಳ್ಳತನ ನಡೆಸಲಾಗಿದೆ.
ಈರುಳ್ಳಿಯೂ ಬೇಕು ಚೀಲಗಳಿಗೆ ತುಂಬುವಂತೆ ಹೇಳಿ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಕಳ್ಳರು, ಬೆಳ್ಳುಳ್ಳಿಯನ್ನು ಬೇರೊಂದು ಆಟೋದಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಇನ್ನೂ ಈರುಳ್ಳಿ ತುಂಬಿಕೊಂಡು ಹೋಗಲು ನಿಂತಿದ್ದ ಟಾಟಾ ಏಸ್ ಚಾಲಕನ್ನು ವ್ಯಾಪಾರಿಗಳು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ನನಗೂ ಬೆಳ್ಳುಳ್ಳಿ ತೆಗೆದುಕೊಂಡು ಹೋದವರಿಗೂ ಸಂಬಂಧವಿಲ್ಲ, ಬಾಡಿಗೆಗೆ ಬಂದಿದ್ದೇನೆ ಎಂದು ಟಾಟಾ ಏಸ್ ಚಾಲಕ ಅಳಲು ತೋಡಿಕೊಂಡಿದ್ದಾನೆ.
1 ಕೆ.ಜಿ ಬೆಳ್ಳುಳ್ಳಿಗೆ ಚಿಕ್ಕಬಳ್ಳಾಪುರದಲ್ಲಿ 450 ರೂಪಾಯಿ ಯಿಂದ 500 ರೂಪಾಯಿ ಬೆಲೆಯಿದೆ.