ಬೆಂಗಳೂರು; ಚಂಡಮಾರುತದ (Cyclone Fengal) ಎಫೆಕ್ಟ್ನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರಂತರವಾಗಿ ಜಡಿ ಮಳೆ ಹಾಗೂ ಶೀತಗಾಳಿ ಕಾಡುತ್ತಿದೆ.
ಹವಾಮಾನ ಇಲಾಖೆಯ ಮಂಗಳವಾರ ರಾತ್ರಿ 8 ವರದಿಯನ್ವಯ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ ಸೇರಿ 5 ಜಿಲ್ಲೆಗಳಲ್ಲಿ ಲಘು ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎಂದಿದೆ.
ವರದಿ ಅನ್ವಯ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಯ ಪ್ರತ್ಯೇಕ ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಟ್ವಿಟ್ ಮಾಡಿದೆ.