ಬೆಂಗಳೂರು: ದೇವನಹಳ್ಳಿ ತಾಲೂಕಿನ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ತಮಿಳುನಾಡಿನ ಚಿನ್ನಮ್ಮ ಚೆನೈಗೆ ಪ್ರಯಾಣ ಬೆಳಸಲಿದ್ದಾರೆ. ಚಿನ್ನಮ್ಮ ಸ್ವಾಗತಿಸಲು ರೆಸಾರ್ಟ್ ನಲ್ಲಿ ತಮಿಳು ಬ್ಯಾನರ್ ಹಾಕಲಾಗಿತ್ತು,ತಮಿಳು
ಬ್ಯಾನರ್ ಸುಟ್ಟು ಹಾಕಿದ ಕನ್ನಡ ಸಂಘಟನೆಯ ಕಾರ್ಯಕರ್ತರು ಚಿನ್ನಮ್ಮ ಅಭಿಮಾನಿಗಳ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದರು.
ಜೈಲು ಶಿಕ್ಷೆಗೆ ಒಳಗಾದ ಶಶಿಕಲಾ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ನಂತರ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ತಮಿಳುನಾಡಿನ ರಾಜಕೀಯ ಲೆಕ್ಕಚಾರ ಹಾಕುತ್ತಿದ್ದರು, ಇಂದು ಬೆಳಗ್ಗೆ ರೆಸಾರ್ಟ್ ನಿಂದ ಚೆನೈಗೆ ಶಶಿಕಲಾ ಪ್ರಯಾಣ ಬೆಳಸಲಿದ್ದಾರೆ.
ಶಶಿಕಲಾರನ್ನ ಸ್ವಾಗತಿಸಲು ತಮಿಳುನಾಡಿನಿಂದ ಚಿನ್ನಮ್ಮ ಬೆಂಬಲಿಗರು ರೆಸಾರ್ಟ್ ನತ್ತ ಧಾವಿಸುತ್ತಿದ್ದಾರೆ. ಜೊತೆಗೆ ಚಿನ್ನಮ್ಮಗೆ ಸ್ವಾಗತ ಕೊರಲು ತಮಿಳಿನಲ್ಲಿ ಬ್ಯಾನರ್ ಗಳನ್ನ ರೆಸಾರ್ಟ್ ಸುತ್ತಮುತ್ತ ಹಾಕಲಾಗಿತ್ತು, ಇದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರ ಅಕ್ರೋಶಕ್ಕೆ ಕಾರಣವಾಗಿದೆ, ರೆಸಾರ್ಟ್ನತ್ತ ಬಂದ ಕನ್ನಡ ಸಂಘಟನೆಗಳ ಕಾರ್ಯಕರ್ತರರು ತಮಿಳು ಬ್ಯಾನರ್ ಸುಟ್ಟು ಶಶಿಕಲಾ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ರೆಸಾರ್ಟ್ ನನ್ನ ತಮಿಳುಮಯ ಮಾಡಲು ಹೊರಟ್ಟಿದ್ದಾರೆ, ಶಶಿಕಲಾ ರೆಸಾರ್ಟ್ ನಲ್ಲಿ ಇರುವುದಕ್ಕೆ ನಮ್ಮದೇನು ತಕರಾರು ಇಲ್ಲ, ಅವರನ್ನು ಸ್ವಾತಂತ್ರ್ಯ ಹೋರಾಟಗಾರರೇ, ವಿಜ್ಞಾನಿಯೇ, ಜೈಲು ಶಿಕ್ಷೆಗೆ ಒಳಗಾದವರನ್ನ ಈ ನೆಲದಲ್ಲಿ ವಿಜೃಂಭಿಸಲು ನಾವು ಬೀಡುದಿಲ್ಲ, ತಮಿಳುನಾಡಿನ ಗಡಿಯಲ್ಲಿಅವರ ವಿಜೃಂಭಣೆ ಮಾಡಿಕೊಳ್ಳಲಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.