> ಶಾಸಕ ಟಿ.ವೆಂಕಟರಮಣಯ್ಯ: ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ನಡೆಯುವ ಪ್ರತಿಭಟನಾ ಮೆರವಣಿಗೆ ಕುರಿತು ನಗರದ ಬಸವನ ಭವನದ ಬಳಿಯಿರುವ ಖಾಸಗಿ ಸಭಾಂಗಣದಲ್ಲಿ ನಡೆಯುವ ಕಾಂಗ್ರೆಸ್ ಸಮಿತಿ ಪೂರ್ವ ಸಿದ್ದತಾ ಸಭೆಯಲ್ಲಿ ಭಾಗಿ.
> ತಹಶೀಲ್ದಾರ್ ಟಿ.ಎಸ್.ಶಿವರಾಜ್: ಹೊಸಹಳ್ಳಿ ಗ್ರಾಪಂ ಭೇಟಿ.
> ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಇಒ ಮುರುಡಯ್ಯ: ತಾಪಂ ಕಚೇರಿಯ ಹಿಂಭಾಗದಲ್ಲಿನ ಸಭಾಂಗಣದಲ್ಲಿ ನಡೆಯುವ ಗ್ರಾಪಂ ಚುನಾಯಿತ ನೂತನ ಸದಸ್ಯರ ತರಬೇತಿ ಕಾರ್ಯಾಗಾರ ಉದ್ಘಾಟನೆಯಲ್ಲಿ ಭಾಗಿ.
> ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಬೆಸ್ಕಾಂ ನಗರ ಎಇಇ ರೋಹಿತ್: ಕಚೇರಿಯಲ್ಲಿ ಲಭ್ಯ.
> ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಕೆ.ಸೋಮಶೇಖರ್: ಕಚೇರಿಯಲ್ಲಿ ಲಭ್ಯ. ಮಧ್ಯಾಹ್ನ ಹೊಸಹಳ್ಳಿ ಭೇಟಿ.
> ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ: ಹೊಸಹಳ್ಳಿ ಗ್ರಾಮಪಂಚಾಯಿತಿ ಭೇಟಿ.
> ಸಿಡಿಪಿಒ ಎಸ್.ಅನಿತಾಲಕ್ಷ್ಮೀ: ಮಧ್ಯಾಹ್ನ 2 ವರೆಗೂ ಆಡಳಿತ ತರಬೇತಿ ಸಂಸ್ಥೆಯಿಂದ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗಿ. ನಂತರ ಪಶುಸಂಗೋಪನ ಇಲಾಖೆಯ ಸಭೆ. ಮುಗಿದ ಮೇಲೆ ಕಚೇರಿಯ ಕಾರ್ಯ ನಿರ್ವಹಣೆ.
> ಬಿಇಒ ಬೈಯಪ್ಪರೆಡ್ಡಿ: ಆರ್ ಟಿ ಇ ಕುರಿತು ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ನಡೆಯುವ ಎರಡನೇ ದಿನದ ಕಾರ್ಯಾಗಾರದಲ್ಲಿ ಭಾಗಿ.
( ತುರ್ತು ಬದಲಾವಣೆ ಹೊರತುಪಡಿಸಿ )
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.