ಚಿಕ್ಕಬಳ್ಳಾಪುರ: ಮದ್ಯದ ಬಾಟಲಿಗಳನ್ನು ಸಾಗಣೆ ಮಾಡುತ್ತಿದ್ದ ಟೆಂಪೋ ಪಲ್ಟಿಯಾಗಿ ರಸ್ತೆ ನಡುವೆ ಮದ್ಯದ ಬಾಟಲಿಗಳು ಒಡೆದು ಚಲ್ಲಾ ಪಿಲ್ಲಿಯಾಗಿ ಬಿದು ಅದರ ನಡುವೆ ಚಾಲಕ ಸಿಲುಕಿ ಕೊಂಡ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯ ಈರ ದಿಮ್ಮಮ್ಮನ ಕಣಿವೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಮದ್ಯ ಸಂಗ್ರಹಣಾ ಗೋಡನ್ ನಿಂದ ವೈನ್ ಶಾಪ್ ಗಳಿಗೆ ಮದ್ಯೆ ಸರಬರಾಜು ಮಾಡಲು ಗೌರಿಬಿದನೂರಿನತ್ತ ಟೆಂಪೋ ತೆರಳುವಾಗ ಈರದಿಮ್ಮಮ್ಮನ ಕಣಿವೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಪಲ್ಟಿಯಾಗಿದೆ.
ಟೆಂಪೋ ಪಲ್ಟಿಯಾದ ಟೆಂಪೋದಲ್ಲಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಟಲಿಗಳು ಒಡೆದು ರಾಶಿಯಾಗಿ ರಸ್ತೆ ಮದ್ಯದಲ್ಲಿ ಬಿದ್ದು ಮದ್ಯದ ಹೊಳೆಯೆ ಹರಿದಿದೆ. ಈ ಬಾಟಲಿಗಳ ರಾಶಿಯ ನಡುವೆ ಟೆಂಪೋ ಚಾಲಕ ಸಿಲುಕಿ ಕೊಂಡಿದ್ದಾಗ ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ತೆರಳಿ ಬಾಟಲಿಗಳ ರಾಶಿಯ ನಡುವೆ ಟೆಂಪೋ ಚಾಲಕ ಸಿಲುಕಿ ಕೊಂಡಿದ್ದ ಚಾಲಕನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಜನವರಿ 29 ರಂದು ಇದೇ ಸ್ಥಳದಲ್ಲಿ ಅಡಿಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಸಹಾ ಇದೆ ರೀತಿಯಲ್ಲಿ ಪಲ್ಟಿಯಾಗಿ ಎಣ್ಣೆಯ ಹೊಳೆ ಹರಿದಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…