ನವದೆಹಲಿ: ಕರೊನ ಸಾಂಕ್ರಾಮಿಕ ಹರಡುವಿಕೆಯ ತಡೆಗಟ್ಟಲು ಘೋಷಿಸಲಾದ ಲಾಕ್‌ಡೌನ್ ಸಂದರ್ಭದಲ್ಲಿ, ವಲಸಿಗರನ್ನು ತಮ್ಮ ಸ್ವಗ್ರಾಮಗಳಿಗೆ ತಲುಪಿಸಲು ನೆರವಾದ ಬಾಲಿವುಡ್ ನಟ ಸೋನಿ ಸೂದ್ ಅವರ ಕಾರ್ಯ ದೇಶಾಧ್ಯಂತ ಪ್ರಶಂಸಗೆ ಕಾರಣವಾಗಿತ್ತು.
ವಲಸಿಗರನ್ನು ಸ್ವಗ್ರಾಮಕ್ಕೆ ತಲುಪಿಸಲು ಹಡಗು, ರೈಲು ಮತ್ತು ಬಸ್ ಮೂಲಕ ಸಾವಿರಾರು ಜನರನ್ನು ಮನೆಗೆ ಸಾಗಿಸಿದರು. ಸೋನು ಸೂದ್ ಅವರ ಜನಪರ ಕಾಳಜಿಗೆ ಸ್ಪೈಸ್ ಜೆಟ್ ಏರ್ಲೈನ್ಸ್ ವಿನೂತನವಾಗಿ ಅಭಿನಂದನೆ ಸಲ್ಲಿಸಿದೆ.
ಸ್ಪೈಸ್ ಜೆಟ್ ಸೋನು ಸೂದ್ ಅವರ ದೊಡ್ಡ ಗಾತ್ರದ ಚಿತ್ರವನ್ನು ಬೋಯಿಂಗ್ 737 ಗೆ ಹಾಕಿದೆ. ಚಿತ್ರದೊಂದಿಗೆ, ಸ್ಪೈಸ್ ಜೆಟ್ ‘ಎ ಸೆಲ್ಯೂಟ್ ಟು ದಿ ಸಂರಕ್ಷಕ ಸೋನು ಸೂದ್ ಎಂದು ಬರೆದಿದೆ.
ಈ ಕುರಿತು ನಟ ಸೋನು ಸೂದ್ ಟ್ವಿಟ್ ಮಾಡಿದ್ದು, ವ್ಯಾಪಕ ಮೆಚ್ಚಿಗೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..