ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ಗೆ ರಾಜ್ಯ ಬಿಜೆಪಿ ಕೌಂಟರ್ ಕೊಟ್ಟಿದೆ.
ಮಜಾವಾದಿ ನಾಯಕನ ರಾತ್ರಿ ಬದುಕು ಹಾಗೂ ಬಟ್ಟೆ ಖರೀದಿ ಬಗ್ಗೆ ಮೈಸೂರಿನ ಪ್ರಖ್ಯಾತ ಜಲದರ್ಷಿನಿಯಲ್ಲಿ ಸಾಕಷ್ಟು ರೋಚಕ ಕತೆಗಳಿವೆ ಅಂತೆ ಎನ್ನುವ ಮೂಲಕ, ರಾಜ್ಯ ರಾಜಕಾರಣದಲ್ಲಿ ಸಿಡಿ ಕೋಲಾಹಲದ ಬೆನ್ನಲ್ಲೆ ಮೈಸೂರಿನ ಜಲದರ್ಷಿನಿ ಚರ್ಚೆ ಹುಟ್ಟುಹಾಕಿದೆ.
ಸಿದ್ದರಾಮಯ್ಯರ ಟ್ವಿಟರ್ಗೆ ಕೌಂಟರ್ ಟ್ವಿಟ್ ಮಾಡಿರುವ, ಬಿಜೆಪಿ ಕರ್ನಾಟಕ. ಮಜಾವಾದಿಗಳ ಸಡಿಲ ಕಚ್ಚೆ ಬಗ್ಗೆ ಪುರಾಣವೇ ಇದೆ @siddaramaiah ಅವರೇ. ಗಾಜಿನ ಮನೆಯಲ್ಲಿ ಕೂತು ಕಚ್ಚೆ ಕಟ್ಟಬೇಡಿ.ಖರೀದಿಸಿದ ಬಟ್ಟೆ ಕೆಲವು ನಿಮ್ಮ ಮಹಾರಾಷ್ಟ್ರದ ಮಂತ್ರಿಗಳಿಗೂ ಕೊಡಿ – ಪೂರ್ತಿಯಾಗಿ ಬಿಚ್ಚಿ ಹೋಗಿದೆ ಅಲ್ಲಿ.
ಉಳಿದರೆ ನೆಹರೂ ಪರಿವಾರಕ್ಕೂ ಕೊಡಿ – ಮಹಾರಾಷ್ಟ್ರ, ಬಂಗಾಳದಲ್ಲಿ ಬೆವರಿಳಿಯುವಾಗ ಒರೆಸಲು ಬೇಕಾಗಬಹುದು.
ಅಂದ ಹಾಗೆ @siddaramaiah ನವರೇ,ಒಬ್ಬ ಮಜಾವಾದಿ ನಾಯಕನ ರಾತ್ರಿ ಬದುಕು ಹಾಗೂ ಬಟ್ಟೆ ಖರೀದಿ ಬಗ್ಗೆ ಮೈಸೂರಿನ ಪ್ರಖ್ಯಾತ ಜಲದರ್ಷಿನಿಯಲ್ಲಿ ಸಾಕಷ್ಟು ರೋಚಕ ಕತೆಗಳಿವೆ ಅಂತೆ.
ಬೇಕಿದ್ದರೆ ನಿಮ್ಮ ಸಮಕಾಲೀನ ಗೆಳೆಯರನ್ನು ಕೇಳಿ ನೋಡಿ. ಆಗ ಯಾರಿಗೆ, ಯಾರು, ಎಷ್ಟು ಜೊತೆ ಬಟ್ಟೆ ಖರೀದಿಸಿ ಕೊಟ್ಟಿದ್ದರು ಎಂಬುದರ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಕುಟುಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..