ದೊಡ್ಡಬಳ್ಳಾಪುರ: ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ವತಿಯಿಂದ, ನಗರದ ಆರ್.ಎಲ್.ಜಾಲಪ್ಪ ಕ್ಯಾಂಪಸ್ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಆರ್.ಎಲ್.ಜಾಲಪ್ಪ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ರೆಡ್ಡಿ, ಪರಿಸರದ ಆಸಕ್ತಿ ಕೇವಲ ಒಂದು ದಿನಕ್ಕೆ ಸೀಮತವಾಗಬಾರದು, ಗಿಡ ನೆಡುವುದು ಎಷ್ಟು ಮುಖ್ಯವೋ ಅದರಂತೆ ನೆಟ್ಟ ಗಿಡಗಳ ಪೋಷಣೆ ಸಹ ಅಷ್ಟೇ ಮುಖ್ಯ.
ಸೂರ್ಯನ ಬೆಳಕು, ಆಮ್ಲಜನಕ, ಮತ್ತು ನೀರು ಮನುಷ್ಯನಿಗೆ ಹೇಗೆ ಮುಖ್ಯವೋ, ಅದೇ ರೀತಿಯಲ್ಲಿ ಜೀವಿವೈವಿಧ್ಯ ರಕ್ಷಣೆಯೂ ಅಷ್ಟೇ ಮಹತ್ವದ್ದು, ಇದನ್ನು ನಮ್ಮ ಉಳಿವಿಗಾಗಿಯಾದರೂ ರಕ್ಷಣೆ ಮಾಡಲೇಬೇಕು ಎಂದರು.
ಸಂಸ್ಥೆಯ ಉದ್ಯೋಗಾಧಿಕಾರಿ ಬಾಬುರೆಡ್ಡಿ ಮಾತನಾಡಿ, ಇಂದಿನ ದಿನಗಳಲ್ಲಿ ಜೂನ್ 5ರಂದು ಮಾತ್ರ ಗಿಡ ನೆಡುವ ಮೂಲಕ “ಪರಿಸರ ಪ್ರೇಮಿ’ ಎನಿಸಿ ಅನಂತರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೇ ಪರಿಸರದ ಕುರಿತಾದ ಭಾಷಣಗಳಿಗೆ ಸೀಮಿತವಾಗಿ ಬಿಟ್ಟಿದೆ. ಅನಂತರ ಪರಿಸರವು ನೆನಪಾಗಬೇಕೆಂದರೆ ಮುಂದಿನ ವರ್ಷದ ಜೂನ್ 5 ಬರಬೇಕು. ಇದು ಬದಲಾಗಬೇಕಿದೆ, ವಾರದಲ್ಲಿ ಒಂದು ಅವಧಿಯಾದರೂ ಪರಿಸರದ ಕುರಿತು ಕಾಳಜಿ ಎಲ್ಲರಲ್ಲೂ ಬರಬೇಕು ಎಂದರು.
ಈ ವೇಳೆ ಎಇಇ ರಮೇಶ್ ಕುಮಾರ್, ವ್ಯವಸ್ಥಾಪಕ ರವಿಕುಮಾರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….