ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕಿತರ ಚಿಕಿತ್ಸೆಗೆಂದು ತಾಲೂಕಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ, ಅಗತ್ಯ ಪರಿಕರಗಳನ್ನು ಪೂರೈಸಲು ಸುಚೇತನ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸದಸ್ಯರು ದಾನಿಗಳ ನೆರವಿನೊಂದಿಗೆ ಶ್ರಮಿಸುತ್ತಿದ್ದಾರೆ.
ಈಗಾಗಲೇ ಎರಡು ಹಂತದಲ್ಲಿ ಪರಿಕರಗಳನ್ನು ವಿತರಿಸಿದ್ದು, ಮೂರನೇ ಹಂತದಲ್ಲಿ ಇಂಡಿಯಾ ಕೇರ್ಸ್ ಫೌಂಡೇಶನ್, ಎನ್ಈಆರ್ಟಿ – ನೈಬರ್ ಹುಡ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ವತಿಯಿಂದ ಸುಮಾರು 90 ಸಾವಿರ ಮೌಲ್ಯದ ಕೋವಿಡ್ ಚಿಕಿತ್ಸಾ ಪರಿಕರಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಸಮ್ಮುಖದಲ್ಲಿ ತಾಲೂಕಿನ ಹುಲಿಕುಂಟೆ ಆರೋಗ್ಯ ಕೇಂದ್ರಕ್ಕೆ ನೀಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಕೋವಿಡ್ ತಡೆಗಟ್ಟಲು ತಾಲೂಕು ಆಡಳಿತದೊಂದಿಗೆ ಸಂಘ ಸಂಸ್ಥೆಗಳು ಬೆಂಬಕವಾಗಿ ನಿಂತು ಹೋರಾಟ ನಡೆಸುತ್ತಿರುವುದು ಪ್ರಶಂಸನೀಯ. ಇಡೀ ಮನುಕುಲಕ್ಕೆ ಕಂಟಕವಾಗಿರುವ ಕರೊನಾ ಸೋಂಕನ್ನು ಹತೋಟಿಗೆ ತರಲು ಪ್ರತಿಯೊಬ್ಬರೂ ಸಹಕಾರ ಅಗತ್ಯ ಎಂದರು.
ವಿತರಿಸಲಾದ ಪರಿಕರಗಳನ್ನು ಆಶಾ ಕಾರ್ಯಕರ್ತೆಯರು, ಮಾಡೇಶ್ವರ ಹಾಗೂ ತಾಲೂಕಿನ ಇತರ ಕೋವಿಡ್ ಕೇರ್ ಕೇಂದ್ರಗಳಲ್ಲಿ ಬಳಸುವಂತೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಹುಲಿಕುಂಟೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಾಲಿನಿ ಸುಚೇತ ಟ್ರಸ್ಟ್ ನ ಮಂಜುನಾಥ್ ನಾಗ್, ಎನ್ಈಆರ್ಟಿ ಯ ರಾಮ್ ಪ್ರಸಾದ್, ತರುಣ್ ಯು, ಬಿ.ವಿ.ಎಸ್. ಶಾಸ್ತ್ರಿ, ಮೋಹನ್.ಜೆ, ಸುನಿತ ಬಿ.ಎಸ್ ನಿತೀನ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….