ದೊಡ್ಡಬಳ್ಳಾಪುರ: ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆಗೆಂದು ನೀಡಲಾಗಿರುವ ಅಟಲ್ ಜಿ ಕ್ಲಿನಿಕ್ ವೈದ್ಯಕೀಯ ಸಿಬ್ಬಂದಿಗಳು ಇಂದು ತಾಲೂಕಿನ ಆರೂಢಿಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿತು.
ತಪಾಸಣೆ ಕಾರ್ಯಕ್ಕೆ ಆರೂಢಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮ ಪ್ರಭು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಆರೋಗ್ಯದ ಕಾಳಜಿ ಅಗತ್ಯವಾಗಿದ್ದು, ಕರೊನಾ ಭೀತಿಯಿಂದ ಚಿಕಿತ್ಸೆಗೆ ತೆರಳದ ತಾಲೂಕಿನಿಂದ ದೂರ ಉಳಿದ ಗ್ರಾಮಗಳಿಗೆ ಅಟಲ್ ಜಿ ಕ್ಲಿನಿಕ್ ಬಂದು ಆರೋಗ್ಯ ತಪಾಸಣೆ ನಡೆಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ತಾಲೂಕಿನ ಜನರ ಆರೋಗ್ಯದ ಕಾಳಜಿ ಹೊಂದಿರುವ ಬಿಜೆಪಿ ಮುಖಂಡ ಧೀರಜ್ ಮುನಿರಾಜು ಅವರು, ಇದೇ ರೀತಿ ತಮ್ಮ ಜನಪರ ಕಾಳಜಿಯುಳ್ಳ ಸೇವೆಯನ್ನು ತಾಲೂಕಿನ ಜನತೆಗೆ ನೀಡಬೇಕೆಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲಮ್ಮ, ಸುವರ್ಣಮ್ಮ, ಅಶಾ ಕಾರ್ಯಕರ್ತೆ ಗಾಯತ್ರಮ್ಮ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..