ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಕಾಣೆಯಾಗಿರುವುದಾಗಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಸಾಸಲು ಹೋಬಳಿಯ ಬನವತಿ ಗ್ರಾಮದ ದೊಡ್ಡ ಕೆಂಪಯ್ಯ(78ವರ್ಷ) 2021ರ ಜೂ.30 ರಂದು ಬನವತಿ ಗ್ರಾಮದಿಂದ ಕಾಣೆಯಾಗಿರುತ್ತಾರೆ.
5.6 ಅಡಿ ಎತ್ತರ ಇರುವ ಇವರು ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಬಿಳಿ ಕೂದಲು, ಬಿಳಿ ಮೀಸೆ ಹೊಂದಿದ್ದಾರೆ.
ಕನ್ನಡ, ತೆಲುಗು ಮಾತಾಡುವವರಾಗಿದ್ದು ಕಾಣೆಯಾದಾಗ ನೀಲಿ ಬಣ್ಣದ ನಿಕ್ಕರ್, ಬಿಳಿ ಬಣ್ಣದ ಅರ್ಧ ತೋಳಿನ ಶರಟು, ಮತ್ತು ಟವಲ್ ತೊಟ್ಟಿರುತ್ತಾರೆ.
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಗುಂಡಮಗೆರೆ ಗ್ರಾಮದ ಲಕ್ಷ್ಮಿಕಾಂತ (45 ವರ್ಷ) 2020ರ ಜ.02ರಿಂದ ಕಾಣೆಯಾಗಿರುತ್ತಾರೆ.
5.5 ಅಡಿ ಎತ್ತರ ಇರುವ ಈತ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲು, ಕುರು ಮೈಕಟ್ಟು ಹೊಂದಿರುತ್ತಾರೆ.
ಕನ್ನಡ, ತೆಲುಗು ಮಾತನಾಡುವ ಲಕ್ಷ್ಮೀಕಾಂತ ಕಾಣೆಯಾದ ವೇಳೆ ನೀಲಿ ಬಣ್ಣದ ಚೆಕ್ಸ್ ಶರಟು, ಬಾದಾಮಿ ಬಣ್ಣದ ಪ್ಯಾಂಟ್, ಬಲಗೈ ಮೇಲೆ ಶ್ಯಾಲು ಹಾಕಿರುತ್ತಾರೆ. ಈತನಿಗೆ ಬಲ ಮೊಣಕೈ ಇರುವುದಿಲ್ಲ.
ಇವರುಗಳ ಮಾಹಿತಿ ತಿಳಿದು ಬಂದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ಗೆ ಮಾಹಿತಿ ನೀಡಲು ಕೋರಿದೆ. ಅಥವಾ ಮೊಬೈಲ್ ನಂಬರ್ 9480802456, 9901238789 ಮೂಲಕ ಮಾಹಿತಿ ನೀಡಲು ಹೊಸಹಳ್ಳಿ ಪೊಲೀಸ್ ಠಾಣೆಯ ಪ್ರಕಟಣೆ ಕೋರಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..