ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಮತ್ತೆ ಕ್ರಿಕೆಟ್ ಗೆ ಮರಳುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಯುವರಾಜ್ ಸಿಂಗ್, “ದೇವರು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತಾನೆ! ಸಾರ್ವಜನಿಕ ಬೇಡಿಕೆಯ ಮೇರೆಗೆ ಫೆಬ್ರವರಿಯಲ್ಲಿ ಪಿಚ್‌ಗೆ ಹಿಂತಿರುಗುವ ಬಗ್ಗೆ ಆಶಾದಾಯಕವಾಗಿದ್ದೇನೆ. ಈ ಭಾವನೆಯ ಹಾಗೆ ಯಾವದೂ ಇಲ್ಲ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಭಾರತವನ್ನು ಬೆಂಬಲಿಸುತ್ತಾ ಇರಿ, ಇದು ನಮ್ಮ ತಂಡ ಮತ್ತು ನಿಜವಾದ ಅಭಿಮಾನಿ ಕಠಿಣ ಸಮಯದಲ್ಲಿ ಅವನ ಬೆಂಬಲವನ್ನು ತೋರಿಸುತ್ತಾನೆ” ಎಂದಿದ್ದಾರೆ.
2019ರ ಜೂನ್ 10ರಂದು ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಆ ಬಳಿಕ ಯುವಿ ಜಿಟಿ20 ಲೀಗ್ ನಲ್ಲಿ ಟೊರಾಂಟೋ ನ್ಯಾಶನಲ್ಸ್ ಪರ ಆಡಿದ್ದರು. ಅಬುಧಾಬಿ ಟಿ10 ಲೀಗ್ ನಲ್ಲಿ ಮರಾಠ ಅರೇಬಿಯನ್ಸ್ ತಂಡದ ಪರವಾಗಿಯೂ ಯುವಿ ಆಡಿದ್ದರು. 2021ರ ಮಾರ್ಚ್ ನಲ್ಲಿ ರೋಡ್ ಸೇಫ್ಟಿ ಲೀಗ್ ನಲ್ಲಿ ಯುವಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
39 ವರ್ಷದ ಯುವರಾಜ್ ಸಿಂಗ್ ಭಾರತದ ನಿಗದಿತ ಕ್ರಿಕೆಟ್ ಮಾದರಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 2011ರ ವಿಶ್ವಕಪ್ ನಲ್ಲಿ ಭಾರತದ ವಿಜಯಕ್ಕೆ ಯುವಿ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್ ನಲ್ಲಿ 90.50ರ ಸರಾಸರಿಯಲ್ಲಿ 362 ರನ್ ಗಳಿಸಿದ್ದ ಯುವಿ, 15 ವಿಕೆಟ್ ಗಳನ್ನೂ ಪಡೆದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……