ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿರುವ ಅರಳುಮಲ್ಲಿಗೆ ಗ್ರಾಮ ಪಂಂಚಾಯಿತಿ 18 ಸದಸ್ಯ ಸ್ಥಾನಗಳು, ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳು ಹಾಗೂ ತೆರವಾಗಿರುವ ತಿಪ್ಪೂರು ಗ್ರಾಮಪಂಚಾಯಿತಿಯ 1ಸ್ಥಾನಕ್ಕೆ ಡಿ.27ರಂದು ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಡಿ.27 ರಂದು ನಡೆದ ಚುನಾವಣೆಯಲ್ಲಿ ಅರಳುಮಲ್ಲಿಗೆ ಗ್ರಾಮಪಂಚಾಯಿತಿಯಲ್ಲಿ ಶೇ.81.04, ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಶೇ. 84.13 ಹಾಗೂ ತಿಪ್ಪೂರು ಗ್ರಾಮ ಪಂಚಾಯ್ತಿಯ ಒಂದು ಕ್ಷೇತ್ರದಲ್ಲಿ ಶೇ92.68 ಮತದಾರರು ಮತ ಚಲಾಯಿಸಲಿದ್ದರು.
ಇಂದು ತಾಲ್ಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಮತಗಳ ಏಣಿಕೆ ಕಾರ್ಯ ಬೆಳಿಗ್ಗೆ 8:00 ಗಂಟೆಯಿಂದ ಆರಂಭವಾಗಿದ್ದು, ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….