ಬೆಂ.ಗ್ರಾ.ಜಿಲ್ಲೆ: ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ “ವೈದರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಜನವರಿ 20 ರಿಂದ ಪುನರಾರಂಭಿಸಲಾಗಿದ್ದು, 7ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ವೈದ್ಯಕೀಯ ತಂಡ ಆರೋಗ್ಯ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗಿದ್ದು, ಕೋವಿಡ್ ಸೋಂಕಿನ ಗುಣಲಕ್ಷಣವಿರುವವರಿಗೆ ಗಂಟಲು ದ್ರವ ಪರೀಕ್ಷೆ, ಆರೋಗ್ಯ ತಪಾಸಣೆ ಹಾಗೂ ಲಸಿಕೆ ಪಡೆಯದವರಿಗೆ ಕೋವಿಡ್ ಲಸಿಕೆ ನೀಡಲಾಗುವುದು.
ಪ್ರತಿ ವೈದ್ಯಕೀಯ ತಂಡದಲ್ಲಿ ಒಬ್ಬರು ವೈದರು ಸೇರಿದಂತೆ ಲಸಿಕೆ ನೀಡಲು ಒಬ್ಬರು ಸ್ಟಾಫ್ ನರ್ಸ್, ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸಲು ಒಬ್ಬರು ಸಿಬ್ಬಂದಿಯನ್ನು ತಂಡವು ಪ್ರತಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಜನವರಿ 23 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ವ್ಯಾಪ್ತಿಯ ಗ್ರಾಮಗಳಾದ ತೀರ್ಥಹಳ್ಳಿ, ಬನಹಳ್ಳಿ, ಸಿದ್ದನಹಳ್ಳಿ, ಕೆ.ಶೆಟ್ಟಹಳ್ಳಿ, ನಂದಗುಡಿ, ಬೈಲನರಸಾಪುರ ವ್ಯಾಪ್ತಿಯ ಗ್ರಾಮಗಳಾದ ನೆಲವಾಗಿಲು, ಕೆಂಬಾಲಿಗನಹಳ್ಳಿ, ತಾವರೆಕೆರೆ, ಸಿ ಟಿ ಗೊಲ್ಲಹಳ್ಳಿ, ಬೈಲನರಸಾಪುರ, ನಗರ ಅರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ವರದಪುರ, ದಂಡುಪಾಳ್ಯ, ಬಸವೇಶ್ವರ ನಗರ, ವಿನಾಯಕ ನಗರ, ಕಿಲಾರಿಪೇಟೆ, ವಿವೇಕಾನಂದನಗರ, ಕನಕ ನಗರ, ಖಾಜಿ ಹೊಸಹಳ್ಳಿ ವ್ಯಾಪ್ತಿಯ ತಿರುಮಲಾಶೆಟ್ಟಹಳ್ಳಿ ಗ್ರಾಮ, ಸೂಲಿಬೆಲೆ ವ್ಯಾಪ್ತಿಯ ಗ್ರಾಮಗಳಾದ ಜನತಾ ಕಾಲೋನಿ, ಮುಸ್ಲಿಂ ಬೀದಿ, ನಗರ್ತರ ಬೀದಿ, ಮಾರುತಿ ನಗರ, ಕುರುಬರ ಪೇಟೆ, ವಾಲ್ಮೀಕಿ ನಗರ, ಬೆಂಡಿಗೇನಹಳ್ಳಿ ವ್ಯಾಪ್ತಿಯ ಗಿಡ್ಡಪ್ಪನಹಳ್ಳಿ ಗ್ರಾಮ, ಶಿವನಪುರ ವ್ಯಾಪ್ತಿಯ ಶಿವನಪುರ ಗ್ರಾಮ, ಮುಗಬಾಳ ವ್ಯಾಪ್ತಿಯ ಗ್ರಾಮಗಳಾದ ಚೋಳಪ್ಪನಹಳ್ಳಿ, ಚಿಕ್ಕನಲ್ಲೂರಹಳ್ಳಿ, ಮಲ್ಲಿಮಕನಾಪುರ, ದಾಸರಹಳ್ಳಿ, ಕೊಳತೂರು, ಯಲಚಹಳ್ಳಿ, ಕೆ.ಸತ್ಯವಾರ, ಮಾಲಿಯಪ್ಪನಹಳ್ಳಿ, ಜಡಿಗೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕರಿಬೀರನ ಹೊಸಹಳ್ಳಿ, ಗೊಣಕನ ಹಳ್ಳಿ, ಬೆಳಮಂಗಳ, ಅನುಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಎಡಗೊಂಡನಹಳ್ಳಿ, ಹಾರೋಹಳ್ಳಿ, ಮುತ್ಸಂದ್ರ ವ್ಯಾಪ್ತಿಯ ಗ್ರಾಮಗಳಾದ ಗಣಗಳೂರು, ತತ್ತನೂರು, ಕೆ.ಮಲ್ಲಸಂದ್ರ ವ್ಯಾಪ್ತಿಯ ಕೆ ಮಲ್ಲಸಂದ್ರ ಗ್ರಾಮ, ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಾದ ಕನಕ ಭವನ, ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ತಂಡ ಭೇಟಿ ನೀಡಲಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಟೌನ್ ವ್ಯಾಪ್ತಿಯ ಗ್ರಾಮಗಳಾದ ಶಿಡ್ಲಘಟ್ಟ ಕ್ರಾಸ್, ಮಾರುತಿನಗರ, ಮೆಹಬೂಬ್ ನಗರ, ಯಲುವಹಳ್ಳಿ, ರಾಜೀವನಗರ, ಚನ್ನರಾಯಪ್ಪ ಬಡಾವಣೆ, ದೇವನಹಳ್ಳಿ ಟೌನ್ ವ್ಯಾಪ್ತಿಯ ಗ್ರಾಮಗಳಾದ ಸರೋವರ ಬೀದಿ, ಗಾರುಡಿಗ ಬೀದಿ, ಆಗಸರ ಬೀದಿ, ಪರ್ವತ ಪುರ, ನರ್ಗತರ ಬೀದಿ, ಮರಳು ಬಾಗಿಲು, ಗೊಡ್ಲಮುದ್ದೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಗೊಲ್ಲಹಳ್ಳಿ, ಗೋಣುರು, ಪಿ ರಂಗನಾಥಪುರ, ಎ. ರಂಗನಾಥಪುರ, ಕಾರಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಮಾಳಿಗೇನಹಳ್ಳಿ, ಕೋಡುಗುರ್ಗಿ, ಯಂಬ್ರಹಳ್ಳಿ, ದಾಸರಹಳ್ಳಿ, ಮದುಗುರ್ಕಿ, ಇರಗೇನಹಳ್ಳಿ, ಹೊಸವಡ್ಯ, ಕಾರಹಳ್ಳಿ, ಮೂಡಗಾನಹಳ್ಳಿ, ತೈಲಗೆರೆ, ಆವತಿ ವ್ಯಾಪ್ತಿಯ ಗ್ರಾಮಗಳಾದ ಬಿಜ್ಜವಾರ, ಬುಳ್ಳಹಳ್ಳಿ, ತಿಮ್ಮಹಳ್ಳಿ, ಅರವನಹಳ್ಳಿ, ರಬ್ಬನಹಳ್ಳಿ, ರಾಮನಾಥಪುರ, ಕೊಯಿರಾ, ಚೆನ್ನರಾಯಪಟ್ಟಣ ವ್ಯಾಪ್ತಿಯ ಗ್ರಾಮಗಳಾದ ಯಲಿಯೂರು, ಮಟ್ಟಬಾರ್ಲು, ದುದ್ದುನಹಳ್ಳಿ, ಬೀರಸಂದ್ರ, ಚಿಕ್ಕಗೊಲ್ಲಹಳ್ಳಿ, ಅರದೇಶನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಪಂಡಿತ್‍ಪುರ, ಜುಟ್ಟನಹಳ್ಳಿ, ದ್ಯಾವರಹಳ್ಳಿ, ಸಾದಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ನಾಗಮಂಗಲ, ಈ ಹೊಸೂರು, ಕುಂದಾಣ ವ್ಯಾಪ್ತಿಯ ಗ್ರಾಮಗಳಾದ ಚಿನ್ನಕೆಂಪನಹಳ್ಳಿ, ಕೊಪ್ಪಳ, ಬೂದಿಗೆರೆ ವ್ಯಾಪ್ತಿಯ ಗ್ರಾಮಗಳಾದ ಹಂದರಹಳ್ಳಿ, ಹೆತ್ತರಹಳ್ಳಿ, ಬೂದಿಗೆರೆ, ನಲ್ಲೂರು ವ್ಯಾಪ್ತಿಯ ಗ್ರಾಮಗಳಾದ ರಾಮನಹಳ್ಳಿ, ಚೀಮಾಚನಹಳ್ಳಿ, ದೊಡ್ಡಸಣ್ಣೆ, ಸೋಮತ್ತನಹಳ್ಳಿ, ಮಲ್ಲೆಪುರ ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಲಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕೋನೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕಾಮನ ಅಗ್ರಹಾರ, ಕೊಲಿಗೆರೆ, ಸೂಲಕುಂಟೆ, ಚನ್ನವೀರನಹಳ್ಳಿ, ಸುತ್ತಳ್ಳಿ, ಸಾಸಲು ವ್ಯಾಪ್ತಿಯ ಗ್ರಾಮಗಳಾದ ಗುಮ್ಮನಹಳ್ಳಿ, ಕನಕೇನಹಳ್ಳಿ, ಸಾಸಲು, ಆರೂಢಿ ವ್ಯಾಪ್ತಿಯ ಗ್ರಾಮಗಳಾದ ಪಾಲನಹಳ್ಳಿ, ಗರಿಕೇನಹಳ್ಳಿ, ಆರೂಢಿ, ದೊಡ್ಡಹೆಜ್ಜಾಜಿ ವ್ಯಾಪ್ತಿಯ ಗ್ರಾಮಗಳಾದ ನಾರನಹಳ್ಳಿ, ಒಡ್ಡರಪಾಳ್ಯ, ಮೂಗೇನಹಳ್ಳಿ, ಕೂಗೇನಹಳ್ಳಿ, ಮಂದಿ ಬ್ಯಾಡರಹಳ್ಳಿ, ಪುಟ್ಟಯ್ಯನಗ್ರಹಾರ, ಹುಲಿಕುಂಟೆ ವ್ಯಾಪ್ತಿಯ ಗ್ರಾಮಗಳಾದ ಹುಲಿಕುಂಟೆ, ಕಾರೇಪುರ, ಐನಹಳ್ಳಿ, ದೊಡ್ಡತುಮಕೂರು ವ್ಯಾಪ್ತಿಯ ಗ್ರಾಮಗಳಾದ ಬಾಶೆಟ್ಟಿಹಳ್ಳಿ, ದೊಡ್ಡತುಮಕೂರು, ಕರೇನಹಳ್ಳಿ, ಮಜುರ ಹೊಸಹಳ್ಳಿ, ಎಳ್ಳುಪುರ ಗುಡ್ಡದಹಳ್ಳಿ, ತೂಬಗೆರೆ ವ್ಯಾಪ್ತಿಯ ಗ್ರಾಮಗಳಾದ ತೂಬಗೆರೆ, ಲಕ್ಷ್ಮಿದೇವಿಪುರ, ಮೇಡಿಹಳ್ಳಿ, ಗಂಟಿಗಾನಹಳ್ಳಿ, ಮಾರಹಳ್ಳಿ, ಭೂಮೇನಹಳ್ಳಿ, ಸೋತೇನಹಳ್ಳಿ, ಕೊಂಡಸಂದ್ರ, ಎದ್ದಲಹಳ್ಳಿ, ಎಸ್.ಎಸ್.ಘಾಟಿ ವ್ಯಾಪ್ತಿಯ ಗ್ರಾಮಗಳಾದ ಮಜರಹೊಸಹಳ್ಳಿ, ಕಂಟನಕುಂಟೆ, ದುರ್ಗೇನಹಳ್ಳಿ,
ನೆಲಗುದಿಗೆ, ತಿರುಮ ಗೊಂಡನಹಳ್ಳಿ, ಪೆರಮ ಗೊಂಡನಹಳ್ಳಿ, ಜಿ ಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಓಜೇನಹಳ್ಳಿ, ಸೋಣೇನಹಳ್ಳಿ, ಚೀಲೇನಹಳ್ಳಿ, ನಾಗಶೆಟ್ಟಿಹಳ್ಳಿ, ಉಜ್ಜಿನಿ, ಜಕ್ಕೇನಹಳ್ಳಿ, ತೇಕಲಹಳ್ಳಿ, ಜಿ.ಹೊಸಹಳ್ಳಿ, ಕನಸವಾಡಿ, ಕಾಡನೂರು, ಕಮ್ಮಸಂದ್ರ, ಹಾಲೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕನಸವಾಡಿ, ಕಾಡನೂರು, ಕಮ್ಮಸಂದ್ರ, ಹಾಲೇನಹಳ್ಳಿ, ಕನಸವಾಡಿ ಕಾಲೋನಿ, ರಾಮದೇವನಹಳ್ಳಿ, ಕಲ್ಲೂಡು, ಕಾಡನೂರು, ವಡಗೆರೆ, ಕಮ್ಮಸಂದ್ರ, ನಲ್ಲೇನಹಳ್ಳಿ, ಕೊನಘಟ್ಟ ವ್ಯಾಪ್ತಿಯ ಗ್ರಾಮಗಳಾದ ರಾಜಘಟ್ಟ, ಲಿಂಗನಹಳ್ಳಿ, ಶಿವಪುರ, ಕೊನಘಟ್ಟ, ಮರಳೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ರಾಜೀವ್ ಗಾಂಧಿ ಕಾಲೋನಿ, ರಾಜೀವ್ ಗಾಂಧಿ ಬಡಾವಣೆ, ಕುರುಬರಹಳ್ಳಿ, ಮರಳೇನಹಳ್ಳಿ, ಮೆಳೇಕೋಟೆ ವ್ಯಾಪ್ತಿಯ ಮೆಳೇಕೋಟೆ ಗ್ರಾಮ, ನಗರ ಆರೋಗ್ಯ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಪ್ರಿಯದರ್ಶಿನಿ ಬಡಾವಣೆ, ಕಛೇರಿಪಾಳ್ಯ, ವಿನಾಯಕನಗರ, ದೇವರಾಜನಗರ, ದರ್ಗಾಪೇಟೆ, ಇಸ್ಲಾಂಪುರ, ತೇರಿನ ಬೀದಿ, ಚೈತನ್ಯನಗರ ಹಾಗೂ ಆಯುಷ್ ಆಸ್ಪತ್ರೆಗೆ ವೈದ್ಯರ ತಂಡ ಭೇಟಿ ನೀಡಲಿದ್ದಾರೆ.
ನೆಲಮಂಗಲ ತಾಲ್ಲೂಕಿನ ಶಿವಗಂಗೆ ವ್ಯಾಪ್ತಿಯ ಶಿವಗಂಗೆ ಗ್ರಾಮ, ಹೊನ್ನೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಬರ್ಗೆನಹಳ್ಳಿ, ಬಿಲ್ಲಿನ ಕೋಟೆ, ಹೊನ್ನೇನಹಳ್ಳಿ, ಕುಲುವನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕುಲವನಹಳ್ಳಿ, ಅರೆ ಬೊಮ್ಮನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಅರೆ ಬೊಮ್ಮನಹಳ್ಳಿ, ತಲೆಕೆರೆಪಾಳ್ಯ, ಅರಿಶಿನಕುಂಟೆ ವ್ಯಾಪ್ತಿಯ ಗ್ರಾಮಗಳಾದ ಬಿನ್ನಮಂಗಲ, ಗುಟ್ಟೆಪಾಳ್ಯ, ಉಟ್ಟಸಿಪಾಳ್ಯ, ದೊಡ್ಡಬೆಲೆ ವ್ಯಾಪ್ತಿಯ ಗ್ರಾಮಗಳಾದ ಇಸುವನಹಳ್ಳಿ, ಇಸುವನಹಳ್ಳಿ ಪಾಳ್ಯ, ವಡಕುಂಟೆ, ನರಸಾಪುರ, ಓಬಳಾಪುರ, ಕಳಲುಘಟ್ಟ ವ್ಯಾಪ್ತಿಯ ಗ್ರಾಮಗಳಾದ ಕಳಲುಘಟ್ಟ, ಜಕ್ಕನಹಳ್ಳಿ, ಕೊಡಿಗೆಹಳ್ಳಿ ಮರಳುಕುಂಟೆ ವ್ಯಾಪ್ತಿಯ ಗ್ರಾಮಗಳಾದ ಮರಳುಕುಂಟೆ, ರುದ್ರನಪಾಳ್ಯ, ಮಣ್ಣೆ ವ್ಯಾಪ್ತಿಯ ಗ್ರಾಮಗಳಾದ ಮಣ್ಣೆ, ಕುಂಟ ಬೊಮ್ಮನಹಳ್ಳಿ, ಹಸಿರುಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಹಸಿರುಹಳ್ಳಿ, ಬೈರ ನಾಯಕನಹಳ್ಳಿ, ಲಕ್ಕಪ್ಪನಹಳ್ಳಿ, ಚಿಕ್ಕನಹಳ್ಳಿ, ಸೋಲದೇವನಹಳ್ಳಿ ಗ್ರಾಮದ ವ್ಯಾಪ್ತಿಯ ಗ್ರಾಮಗಳಾದ ಸೋಲದೇವನಹಳ್ಳಿ, ಬಾಣಸವಾಡಿ, ಹಂದಿಗುಟ್ಟೆ, ರಂಗಯ್ಯನಪಾಳ್ಯ, ಯಂಟಗಾನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಮಹದೇವಪುರ, ಯಂಟಗಾನಹಳ್ಳಿ, ಅಗಳಕುಪ್ಪೆ ವ್ಯಾಪ್ತಿಯ ಗ್ರಾಮಗಳಾದ ದೇವರಹೊಸಹಳ್ಳಿ ತೋಟ, ಹಳೇನಿಜಗಲ್ ಹಾಗೂ ರಾಯರ ಪಾಳ್ಯ ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಮುಖ್ಯ ಪಾತ್ರವಹಿಸಲಿದ್ದು, ಜಿಲ್ಲೆಯ ಜನತೆ ಸಹಕರಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….