ದೊಡ್ಡಬಳ್ಳಾಪುರ: ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು / ವಿವಿಧೆಡೆ ದಾಳಿ / ವಿದ್ಯಾರ್ಥಿಗಳ ಗುರಿಯಾಗಿಸಿದ್ದ ವಿದೇಶಿ ಪ್ರಜೆ ಸೇರಿ 7 ಜನರ ಬಂಧನ

ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ನೈಜೀರಿಯಾ ದೇಶದ ಪ್ರಜೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ವಂಶಿಕೃಷ್ಣ ಹಾಗೂ ಎಎಸ್ಪಿ ಲಕ್ಷ್ಮೀ ಗಣೇಶ್ ಅವರ ಸೂಚನೆಯ ಮೇರೆಗೆ ದೊಡ್ಡಬಳ್ಳಾಪುರ ವೃತ್ತದ ರಾಜಾನುಕುಂಟೆ, ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಾನುಕುಂಟೆ: ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ, ಭವಿತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪಿಜಿ, ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬಂದಿದ್ದ ವಿದೇಶಿ ಪ್ರಜೆ ಅಗ್ಬಾಯ್ ಅಜುಕ್ವು ಓನ್ವುಕಾ ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ ಪ್ರಚೋದಕ ಮಾತ್ರೆಗಳು, ಕ್ರಿಸ್ಟಲ್ ಮಿತ್ ಪುಡಿ, ಕೊಕೇನ್ ಹಾಗೂ ಎಲ್.ಎಸ್.ಡಿ ಸ್ಟಾಂಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ದೊಡ್ಡಬೆಳವಂಗಲ: ಸಬ್ ಇನ್ಸ್‌ಪೆಕ್ಟರ್ ಜ್ಞಾನಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಮಾಹಿತಿ ಮೇರೆಗೆ ಅಮಿತ್ (21ವರ್ಷ) ಎಂಬುವವರನ್ನು ಬಂಧಿಸಿ ಸುಮಾರು ಒಂದು ಲಕ್ಷ ಮೌಲ್ಯದ (ಎಗ್ರೇಡ್) ಗಾಂಜಾ ವಶಪಡಿಸಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ ನಗರ: ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ನೇತೃತ್ವದಲ್ಲಿ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುವ ವೇಳೆ ದಾಬಸ್ ಪೇಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಒಂದೇ ದ್ವಿಚಕ್ರ ವಾಹನದಲ್ಲಿ ಬಂದ ಮೂವರನ್ನು ತಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಸವಾರರು ಅನುಮಾನಸ್ಪದವಾಗಿ ವರ್ತಿಸಿದ ಕಾರಣ ಬ್ಯಾಗ್ ಚೆಕ್ ಮಾಡಿದಾಗ ಸುಮಾರು 20 ಸಾವಿರಕ್ಕೂ ಹೆಚ್ಚು ಮೌಲ್ಯದ ಗಾಂಜಾ ಸೊಪ್ಪು ಪತ್ತೆಯಾಗಿದೆ.

ಈ ಕುರಿತಂತೆ ಕೋಳಾಲ ವ್ಯಾಪ್ತಿಯ ರಂಗ (25), ದೊಡ್ಡಬಳ್ಳಾಪುರ ನಗರದ ರಾಕೇಶ್ (20), ತನುಶ್ (25) ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ: ಟಫೆ ಕಾರ್ಖಾನೆ ಬಳಿ ನಿಲ್ಲುತ್ತಿದ್ದ ಹೊರ ರಾಜ್ಯದ ಚಾಲಕರಿಗೆ ಗಾಂಜಾ ಸೋಪ್ಪು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಹಿನ್ನಲೆ, ನಿಗಾವಹಿಸಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸರು ಗಾಂಜಾ ಸೊಪ್ಪುಗಳ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ..

ಹಲವು ದಿನಗಳಿಂದ ಸತತ ನಿಗಾವಹಿಸಿದ ಗ್ರಾಮಾಂತರ ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ. ಬಂಧಿತರನ್ನು ಮಾರಸಂದ್ರದ ಸುರೇಂದ್ರ (35 ವರ್ಷ), ದೊಡ್ಡಬಳ್ಳಾಪುರದ ಪವನ್ ಕುಮಾರ್ (19) ವರ್ಷ ಎನ್ನಲಾಗಿದ್ದು, ಆರೋಪಿಗಳಿಂದ 3 ಕೆಜಿ 100 ಗ್ರಾಂ ಮೌಲ್ಯದ ಎ ಗ್ರೇಡ್ ಗಾಂಜಾ ಸೊಪ್ಪನ್ನು ವಶ ಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯದ ಅರಿವಿಗೆ ಕಾರ್ಯಾಗಾರ ಅಗತ್ಯ: ಮಾದಕ ವಸ್ತುಗಳು ಸಮಾಜದ ಪಿಡುಗಾಗಿದ್ದು, ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡುವುತ್ತಿರುವ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಅಗತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕ ವಸ್ತುಗಳ ಗುಂಗಿನಲ್ಲಿ ನಡೆಯುವ ಅಹಿತರ ಘಟನೆಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜುಗಳ ಆಡಳಿತ ಮಂಡಳಿಗಳು ತಜ್ಞರು, ಪರಿಣಿತರು, ವೈದ್ಯರು, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಾಗಾರ ನಡೆಸಿ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಬೇಕಿದೆ.

ಈ ಕಾರ್ಯಾಚರಣೆ ಸಾಧನೆಯಲ್ಲ, ಇದು ಸಮಾಜಕ್ಕೆ ಕಳಂಕವಾಗಿದೆ. ವಿದ್ಯಾರ್ಥಿಗಳ ಜೀವನವನ್ನು ಹಾಳುಗೆಡುವುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲದ ಬೇರನ್ನು ಭೇದಿಸಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದು: ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದು: ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಸೈನ್ಯದಲ್ಲಿ , ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah)

[ccc_my_favorite_select_button post_id="111004"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!