ನೆಲಮಂಗಲ, (ಜುಲೈ.29): ನೆಲಮಂಗಲ – ಕುಣಿಗಲ್ NH-75 ಹೆದ್ದಾರಿಯಲ್ಲಿ ಅಪಾಯಕಾರಿ ವೀಲಿಂಗ್ ಮಾಡಿ ಪುಡಾಂಟ ನಡೆಸಿದ ಐವರು ಯುವಕರನ್ನ ನೆಲಮಂಗಲ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 27ರಂದು ನೆಲಮಂಗಲ ತಾಲೂಕಿನ ಕುಣಿಗಲ್ ರಸ್ತೆಯಲ್ಲಿ ನೆಲಮಂಗಲ ಸಂಚಾರಿ ಪೊಲೀಸ್ ಇನ್ಸ್ ಪೇಕ್ಟರ್ ನವೀನ್ ಕುಮಾರ್ ಮತ್ತು ತಂಡ ಗಸ್ತಿನಲ್ಲಿದ್ದ ವೇಳೆ ಬೈಕ್ ವಿಲೀಂಗ್ ಮಾಡುತ್ತಿದ್ದ ಪುಂಡರು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳು ಮೊಪೆಡ್ ನಲ್ಲಿ ಡಬಲ್ ರೈಡಿಂಗ್ ಮಾಡಿ ಅಜಾಗರೂಕತೆಯ ಚಾಲನೆ ಮಾಡಿ ಸುಗಮ ಸಂಚಾರಕ್ಕೆ ಆಡಚಣೆ ಉಂಟು ಮಾಡಿದ್ದರು.
ಅಲ್ಲದೆ ಕರ್ಕಶ ಶಬ್ದ ಮಾಡಿ ಸವಾರರಿಗೆ ತೊಂದರೆಯನ್ನುಂಟು ಮಾಡಿದ ಆರೋಪ ಮೇಲೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….