ಸೋಮವಾರ, ಜುಲೈ 29, 2024, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಇಂದು ಭಾರೀ ಲಾಭವನ್ನು ನಿರೀಕ್ಷಿಸಬಹುದು. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಬಲಗೊಳ್ಳಲಿದೆ. ಶನಿ ದೇವನ ಕೃಪೆಯಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ನೀವು ಉನ್ನತ ವಿದ್ಯಾಭ್ಯಾಸ ಇಲ್ಲವೇ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಈ ಸಂರ್ಭದಲ್ಲಿ ನಿಮ್ಮ ಬಹು ದಿನಗಳ ಕನಸು ಕೂಡ ನನಸಾಗಲಿದೆ.
ವೃಷಭ ರಾಶಿ: ಇಂದು ಖರ್ಚು ಹೆಚ್ಚಾಗಲಿದೆ. ನಿಮ್ಮ ಸಮಸ್ಯೆಗಳು ಸ್ವಲ್ಪ ಸ್ವಲ್ಪ ವಾಗಿ ಕಡಿಮೆಯಾಗುತ್ತವೆ. ಯೋಗಕಾರಕ ಶನಿಯು ವರ್ಷವಿಡೀ ಹತ್ತನೇ ಮನೆಯಲ್ಲಿ ಇರುವುದರಿಂದ ಕಠಿಣ ಪರಿಶ್ರಮ ಅಗತ್ಯವಿರುತ್ತದೆ. ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲವೂ ಲಭ್ಯವಿರುತ್ತದೆ. ವೃತ್ತಿ ಬದುಕಿನಲ್ಲಿ ರಾಜಯೋಗವಿದ್ದು, ಪ್ರಗತಿಯ ಹಾದಿಗಳು ತೆರೆಯಲಿವೆ.
ಮಿಥುನ ರಾಶಿ: ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶುಭ ಫಲಗಳನ್ನು ನೀಡಲಿದೆ. ಇದು ಕೌಟುಂಬಿಕ ಸಂತೋಷ ವನ್ನು ಹೆಚ್ಚಿಸಲಿದ್ದು ಹಣಕಾಸಿನ ಬಂಪರ್ ಲಾಭವನ್ನು ಸಹ ನಿರೀಕ್ಷಿಸಬಹುದು. ಒಟ್ಟಾರೆಯಾಗಿ, ಸಂಗಾತಿ, ಮಕ್ಕಳು, ಕುಟುಂಬಕ್ಕೆ ಸಂಬಂಧಿಸಿದಂತೆ ಈ ದಿನವು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.
ಕರ್ಕಾಟಕ ರಾಶಿ: ಇಂದು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಿಶ್ರ ಫಲಗಳನ್ನು ಪಡೆಯಲಿದ್ದಾರೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಸವಾಲುಗಳು ಹೆಚ್ಚಾಗಲಿದ್ದು, ಬಹುತೇಕ ಸಂದರ್ಭದಲ್ಲಿ ಹಠಾತ್ ಕೆಲಸ ಬದಲಾವಣೆಯಂತಹ ಸಮಸ್ಯೆಯನ್ನೂ ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ಸಂಯಮದಿಂದ ಯಾವುದೇ ಕೆಲಸ ಮಾಡುವುದನ್ನು ಪರಿಗಣಿಸಿ.
ಸಿಂಹ ರಾಶಿ: ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ನೀವು ಯೋಚಿಸುವುದಕ್ಕಿಂತ ಹೆಚ್ಚು ಆದಾಯವನ್ನು ಪಡೆಯುವಿರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕೌಟುಂಬಿಕ ಸುಖವನ್ನೂ ಅನುಭವಿಸುವಿರಿ.
ಕನ್ಯಾ ರಾಶಿ: ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ವ್ಯಾಪಾರಸ್ಥ ರೂ ಸಹ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಬಿಸಿನೆಸ್ ಮಾಡುವ ವ್ಯಕ್ತಿಗಳು ವಿದೇಶಿ ಸಂಪರ್ಕವನ್ನು ಸಾಧಿಸಲು ಯೋಚಿಸುತ್ತಿದ್ದರೆ ಈ ದಿನ ಅದು ಸಾಧ್ಯವಾಗಲಿದೆ.
ತುಲಾ ರಾಶಿ: ಈ ದಿನದ ಆರಂಭವು ವೈವಾಹಿಕ ಸಂಬಂಧಗಳಿಗೆ ಅನುಕೂಲಕರ ವಾಗಿರುತ್ತದೆ. ಇಂದು ಮಧ್ಯದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಬಾಧಿಸಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಹೆಚ್ಚು ಅರ್ಥಮಾಡಿಕೊಂಡರೆ ಎಂತಹುದೇ ಸಮಸ್ಯೆಗಳಿಂದ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು.
ವೃಶ್ಚಿಕ ರಾಶಿ: ವೃತ್ತಿಯಲ್ಲಿ ಪ್ರಗತಿ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ವರಿಗೆ ನೆಚ್ಚಿನ ಉದ್ಯೋಗವನ್ನು ನೀಡಲಿದೆ. ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿರುತ್ತದೆ. ಹೊಸ ಉದ್ಯೋಗ ಸಿಗಬಹುದು. ನೀವು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದೆ. ಶತ್ರುಗಳ ವಿರುದ್ಧ ಜನ ನಿಮ್ಮದಾಗಲಿದ್ದು ಯಾವುದೇ ಹೊಸ ಯೋಜನೆಯಲ್ಲಿ ನೀವು ಸುಲಭವಾಗಿ ಜಯ ಸಾಧಿಸುವಿರಿ.
ಧನಸ್ಸು ರಾಶಿ: ನೀವು ಸೋಮಾರಿತನವನ್ನು ಬಿಟ್ಟರಷ್ಟೇ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂಬುದನ್ನೂ ಧನು ರಾಶಿಯವರು ನೆನಪಿಡಿ. ರಾಹುವಿನ ಪ್ರಭಾವದಿಂದಾಗಿ ಉದ್ಯೋಗ ಕ್ಷೇತ್ರಗಳು ಏರಿಳಿತಗಳು ಕಂಡು ಬರಲಿವೆ. ಕೌಟುಂಬಿಕ ಜೀವನದಲ್ಲಿಯೂ ನೀವು ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಮಕರ ರಾಶಿ: ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಖಂಡಿತ ವಾಗಿಯೂ ವಿಜಯಮಾಲೆ ನಿಮ್ಮದೇ ಆಗಿರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ನಿಮ್ಮ ಕುಟುಂಬ ಜೀವನದ ಸುಖ ಸಂತೋಷಕ್ಕೆ ಕಾರಣವಾಗಲಿದೆ.
ಕುಂಭ ರಾಶಿ: ಯಾವುದೇ ಕೆಲಸದಲ್ಲಿ ಸಂಪೂರ್ಣ ಪರಿಶ್ರಮದ ಫಲ ದೊರೆಯಲಿದೆ. ಇದು ನಿಮ್ಮನ್ನು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. ಒಟ್ಟಾರೆಯಾಗಿ ಇಂದು ಅತ್ಯುತ್ತಮ ಸಮಯ ಎಂದು ಹೇಳಬಹುದು.
ಮೀನ ರಾಶಿ: ಈ ರಾಶಿಯವರ ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ನಿಮ್ಮ ಮಾತಿನಲ್ಲಿ ಮಾಧುರ್ಯ ಹೆಚ್ಚಲಿದ್ದು ಇದು ಸಂಬಂಧಗಳನ್ನು ಬಳಪಡಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ವೃತ್ತಿ ಬದುಕಿನಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಅದೃಷ್ಟದ ಬೆಂಬಲದಿಂದಾಗಿ ಮೀನ ರಾಶಿಯವರು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ಆದಾಗ್ಯೂ, ಖರ್ಚುಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ತಿಥಿ: ನವಮಿ
ನಕ್ಷತ್ರ: ಭರಣಿ ನಕ್ಷತ್ರ.
ರಾಹುಕಾಲ: 07:30AM ರಿಂದ 09:00AM
ಗುಳಿಕಕಾಲ: 01:30PM ರಿಂದ 03:00PM
ಯಮಗಂಡಕಾಲ: 10:30AMರಿಂದ 12:00PM
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….