ದೊಡ್ಡಬಳ್ಳಾಪುರ (Doddaballapura): ಶ್ರೀರಾಮನವಮಿಯ ಪ್ರಯುಕ್ತ ನಡೆಯಲಿರುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ರಾಜಘಟ್ಟ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಈಗಾಗಲೇ ದೇವಾಲಯದ ಆವರಣದಲ್ಲಿ ಸ್ವಚ್ಚತೆ ಮಾಡಲಾಗಿದ್ದು, ಅನ್ನದಾಸೋಹಕ್ಕೆ ಸೌದೆಗಳನ್ನು ತುಂಡು ಮಾಡುವ ಕಾರ್ಯ ಜರಗುತ್ತಿದೆ.
ಅನ್ನದಾಸೋಹ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚಿನ ಜನರಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಏಪ್ರಿಲ್ 6ರಂದು ವಿಶೇಷ ಪೂಜೆ, 7 ರಂದು ರಥೋತ್ಸವ ಹಾಗೂ ಹೂವಿನ ದೀಪಗಳು ಹಾಗೂ 8ರಂದು ಪರಿಷೆ ನಡೆಯಲಿದೆ.
ರಾಜಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಾಸ್ಥರು ಭಾಗವಹಿಸಲ್ಲಿದ್ದಾರೆ.