ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಬಾಶೆಟ್ಟಿಹಳ್ಳಿ ಸಮೀಪದ ಎಳ್ಳುಪುರ ರಸ್ತೆಯಲ್ಲಿರುವ ಗುಜರಿ ಗೋಡಾನ್‌ಗೆ ಇಂದು ಮುಂಜಾನೆ (ಶುಕ್ರವಾರ) ಬೆಂಕಿ ತಗುಲಿ ಅಪಾರ ಪ್ರಮಾಣ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಅಸ್ಲಂ ಪಾಷಾ ಎನ್ನುವವರಿಗೆ ಸೇರಿದ ಈ ಗುಜರಿ ಗೋಡಾನ್ಗೆ ಆಕಸ್ಮಿಕವಾಗಿ ತಗುಲಿರುವ ಬೆಂಕಿಯಿಂದಾಗಿ ಕಾಟನ್ ಬಾಕ್ಸ್ ಗೋಡನ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ.
ಏಕಾಏಕಿ ಹೊತ್ತಿಉರಿದ ಬೆಂಕಿಯಿಂದಾಗಿ ಈ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.