ದೊಡ್ಡಬಳ್ಳಾಪುರ: ಶ್ರೀ ವೀರಬ್ರಹ್ಮಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಪೋತಲೂರಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ (Shri Veerabrahmendra swamy) ಅವರ 14ನೇ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿ, ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವೀರಬ್ರಹ್ಮಂದ್ರ ಸ್ವಾಮಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಭೋಜರಾಜಚಾರ್, ಅಧ್ಯಕ್ಷ ವೆಂಕಟಾಚಲಪತಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಟ್ರಸ್ಟಿಗಳಾದ ಪಿ.ಕುಮಾರ್, ಜಗದೀಶಚಾರ್, ಶಂಕರಾಚಾರ್, ಎಚ್.ಆರ್.ಮಂಜುನಾಥ್, ಎಚ್.ಎಮ್.ಮನೋಹರ್, ಭಾಸ್ಕರಾಚಾರ್, ನಾರಾಯಣಚಾರ್, ರಮೇಶಚಾರ್, ಮೋಹನಾ ಚಾರ್, ಗಂಗಾಧರಚಾರ್, ವೆಂಕಟೇಶಮೂರ್ತಿ ಮತ್ತಿತರರಿದ್ದರು.