ದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Pm kisan) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ‘ಕೃಷಿಕರ ಗುರುತಿನ ಚೀಟಿ’ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರ ರೈತರಿಗೆ ಶಾಕ್ ನೀಡಿದೆ.
ರೈತ ವಿಶಿಷ್ಟ ಗುರುತಿನ ಚೀಟಿ
ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರು ತಿನ ಚೀಟಿ ದೃಢಪಡಿಸುತ್ತದೆ. ಆದ ಕಾರಣ, ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ.
ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭ. ಹಾಗಾಗಿ, ಹೊಸ ಅರ್ಜಿದಾರರೆಲ್ಲರೂ ‘ಫಾರ್ಮಸ್್ರ ರಿಜಿಸ್ಟ್ರಿ’ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜ.1ರಿಂದಲೇ ಜಾರಿಗೆ ಬಂದಿದೆ. ಮುಂಬರುವ ದಿನಗ ‘ಳಲ್ಲಿ ಉಳಿದ ರಾಜ್ಯಗಳಿಗೂ ಇದು ವಿಸ್ತರಣೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯ್ಲಿ ಹೇಳಲಾಗಿದೆ.
‘ಕಿಸಾನ್ ಪೆಹಚಾನ್ ಪತ್ರ’ ಅಥವಾ ‘ರೈತ ಗುರುತಿನ ಚೀಟಿ’ ಎನ್ನುವುದು ರಾಜ್ಯಗಳ ಭೂ ದಾಖಲೆಗಳ ಜತೆಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ.
ಇದರಲ್ಲಿ ರೈತನ ಹೆಸರು, ಕೃಷಿಭೂಮಿ ಮಾಹಿತಿ, ಆ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಗಳ ವಿವರಗಳಿರುತ್ತವೆ. ಆದರೆ ಇಕೆವೈಸಿ ನೆಪದಲ್ಲಿ ಅನೇಕ ರೈತರು ಯೋಜನೆಯಿಂದ ವಂಚಿತರಾಗಿರುವ ಬೆನ್ನಲ್ಲೇ, ಐಡಿ ಕಾರ್ಡ್ ನೆಪದಲ್ಲಿ ಮತ್ತಷ್ಟು ರೈತರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.