ದೊಡ್ಡಬಳ್ಳಾಪುರ (Doddaballapura): ನಗರದ ದರ್ಗಾಜೋಗಿಹಳ್ಳಿ ವ್ಯಾಪ್ತಿಯ ವಸತಿ ಬಡಾವಣೆಯಲ್ಲಿ ಚಿರತೆ ಮರಿ ಕಂಡು ಬಂದಿದೆ ಎಂಬ ವದಂತಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಿನ್ನೆ ಬೆಳಗ್ಗೆ ದರ್ಗಾಜೋಗಿಹಳ್ಳಿ ಮತ್ತು ಜಾಲಪ್ಪ ಕಾಲೇಜು ನಡುವಿನ ವಸತಿ ಬಡಾವಣೆಯಲ್ಲಿ ಚಿರತೆ ಮರಿಯೊಂದು ಕಂಡು ಬಂದಿರುವುದಾಗಿ ವದಂತಿ ವ್ಯಾಪಕವಾಗಿ ಹಬ್ಬಿದೆ.
ವಿಷಯ ತಿಳಿದು ಸ್ಥಳಕ್ಕೆ ಬೋನ್ ನೊಂದಿಗೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ವೇಳೆ ಸುಮಾರು ಮೂರು ಸೈಟಿನಲ್ಲಿದ್ದ ಬೇಲಿ ಪದರೆಯನ್ನು ಜೆಸಿಬಿ ಬಳಸಿ ಸ್ವಚ್ಚಗೊಳಿಸಿ, ಮಧ್ಯಾಹ್ನ 2 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಿದರೂ.. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆಯಾಗಲಿ ಮರಿಯಾಗಲಿ ಕಾಣಿಸಲಿಲ್ಲ.
ಅಂತಿಮವಾಗಿ ಕಾರ್ಯಚರಣೆ ಸ್ಥಗಿತಗೊಳಿಸಿದ ಅಧಿಕಾರಿಗಳು.. ಮುನ್ನೆಚ್ಚರಿಕೆಯಿಂದ ಇರುವಂತೆ ಸ್ಥಳೀಯರಿಗೆ ಸೂಚಿಸಿದಲ್ಲದೆ, ಮತ್ತೆ ಚಿರತೆ ಕಂಡು ಬಂದರೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿ ತೆರಳಿದರು.
ಒಟ್ಟಾರೆ ನಗರದ ಜನವಸತಿ ಪ್ರದೇಶದಲ್ಲಿ ಚಿರತೆ ಮರಿ ಕಂಡು ಬಂದಿದೆ ಎಂಬ ವದಂತಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಕಂಡು ಬಂದಿದ್ದು, ಚಿರತೆ ಮರಿಯೋ, ಬೆಕ್ಕಿನ ಮರಿಯೋ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.