Haritalekhani A story a day: Illusion

Daily story: ಹರಿತಲೇಖನಿ ದಿನಕ್ಕೊಂದು ಕಥೆ: ಭ್ರಮೆ

Daily story: ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.

ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ, ಮಹಾಸ್ವಾಮಿ, ಒಂದು ಹಕ್ಕಿ, ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ ಹಾರಾಡುತ್ತದೆ. ಆದರೆ ಇನ್ನೊಂದು ಏನು ಮಾಡಿದರೂ ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ..

ನಾನು ಅದು ಹಾರಲು ನನ್ನ ಬುದ್ದಿಯನ್ನೆಲ್ಲಾ ಉಪಯೋಗಿಸಿದ್ದೇನೆ. ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.

ಏನೋ ಅನಾರೋಗ್ಯ ಇರಬೇಕೆಂದು, ಭಾವಿಸಿದ ರಾಜ, ವೈಧ್ಯರು, ಚಿಕಿತ್ಸಕರನ್ನು ಕರೆಸಿ, ಔಷಧೋಪಚಾರ ಮಾಡಿಸಿದ. ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ.

ರಾಜನಿಗೆ ತುಂಬಾ ಬೇಸರವಾಯ್ತ.
ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ ರೈತಾಪಿ ವ್ಯಕ್ತಿಯನ್ನು ಕರೆತಂದು ಇದರ ವಿಷಯವನ್ನು ತಿಳಿಸಿದ.

ಮರು ದಿನ ಅಂತಃಪುರದ ಕಿಟಕಿಯಿಂದ ನೋಡಿದಾಗ ಈ ಗಿಡುಗ, ಗರಿಗೆದರಿ ಆಕಾಶದಲ್ಲಿ ಮುಕ್ತವಾಗಿ ಹಾರಾಡುವುದನ್ನು ಕಂಡು ರಾಜನಿಗೆ ಬಹಳ ಖುಷಿಯಾಯಿತು.

ಅರೆ ಆ ರೈತ ಏನು ಚಮತ್ಕಾರ ಮಾಡಿದ, ಆತನನ್ನು ಕರೆತನ್ನಿ ಎಂದು ಆದೇಶ ಮಾಡಿದ.

ಏನು ಮಂತ್ರ ಮಾಡಿದೆ, ಈ ಹಕ್ಕಿಗೆ ಹೇಳು ಎಂದು ರೈತನನ್ನು ಕೇಳಿದ. ಆಗ ರೈತ ಅತ್ಯಂತ ವಿನಯವಾಗಿ ನಾನೇನು ಮಾಡಲಿಲ್ಲ ಮಹಾಸ್ವಾಮಿ, ಗಿಡುಗ ಕೂತಿದ್ದ ರಂಬೆಯನ್ನು ಕಡಿದು ಹಾಕಿದೆ ಅಷ್ಟೇ, ಗಿಡುಗ ತಾನಾಗಿಯೇ ಮೇಲೆ ಹಾರಿತು, ಅಂದ.

ಹೀಗೆಯೇ ನಾವೆಲ್ಲರೂ ಅಸಮಾನ್ಯ, ಪ್ರತಿಭೆಯನ್ನುಹೊತ್ತೇ ಹುಟ್ಟಿರುತ್ತೇವೆ. ಆದರೆ ಚಿರಪರಿಚಿತರನ್ನು ಹಿಡಿದು ,ಕೂತಲ್ಲೇ ಕೂತಿರುತ್ತೇವೆ.

ಪರಿಚಿತ ಸುಲಭಕರ, ಸರ್ವ ಸಾಧಾರಣ ವಿಷಯಕ್ಕೆ ಅಂಟಿಕೊಂಡು ಕೂತಿರುತೇವೆ. ವಿಶಾಲ ಪ್ರಪಂಚದ ಅರಿವೇ ಇರುವುದಿಲ್ಲ, ಇಷ್ಟೇ ಜೀವನ ಎಂಬ ಭಯದಲ್ಲಿ ಹುದುಗಿರುತ್ತೇವೆ.

ಒಂದು ಸಲ ಭಯದ ಕೊಂಬೆಯನ್ನು ಕತ್ತರಿಸಿ, ಸ್ವನಿರ್ಮಿತ ಬಂಧನದಿಂದ ಮುಕ್ತರಾದಾಗ, ಗರಿಗೆದರಿ ಹಾರುವ ಭವ್ಯತೆಯನ್ನು ಕಂಡುಕೊಳ್ಳಬಹುದು.

ಕೃಪೆ: ಸುವರ್ಣಾಮೂರ್ತಿ. ಸಂಗ್ರಹ: ಸಾಮಾಜಿಕ ಜಾಲತಾಣ.

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!