ದೊಡ್ಡಬಳ್ಳಾಪುರ (Doddaballapura): ವಿಶ್ವ ವಿದ್ಯಾಲಯ ಒಂದರ ಭದ್ರತೆ ನಿಯೋಜಿಸಿರುವ ಸೆಕ್ಯುರಿಟಿ ಗಾರ್ಡ್‌ಗಳು ಬೀದಿ ಬದಿ ವ್ಯಾಪಾರಿಗೆ ತೊಂದರೆ ನೀಡಿರುವ ಆರೋಪ ಕೇಳಿಬಂದಿದೆ.
ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ (Gitam vv) ಭದ್ರತಾ ಸಿಬ್ಬಂದಿಗಳು, ಸಂಜೆ ಸಮಯದಲ್ಲಿ ರಸ್ತೆ ಬದಿಯಲ್ಲಿ ಚಿಕ್ಕದಾಗಿ ಅಂಗಡಿ ನಡೆಸುವ ಬೀದಿ ಬದಿ ವ್ಯಾಪಾರಿಗೆ ಅಂಗಡಿ ನಡೆಸದಂತೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ (Rajagatta Ravi) ನೇತೃತ್ವದ ಪದಾಧಿಕಾರಿಗಳು ಸೆಕ್ಯುರಿಟಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಿ ಜಾಗದಲ್ಲಿ ಹೊಟ್ಟೆಪಾಡಿಗಾಗಿ ಅಂಗಡಿ ನಡೆಸಿದರೆ ಕಿರುಕುಳ ನೀಡುವುದು ಖಂಡನೀಯ, ಇಲ್ಲಿದ್ದ ಕುಂಟೆ ಮುಚ್ಚಿರುವ ಕತೆಗಳು ಎಲ್ಲ ಬೇರೆ ವಿಷಯ. ಆದರೆ ಬಡವರಿಗೆ ತೊಂದರೆ ಉಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.
ಬೀದಿ ಬದಿ ವ್ಯಾಪಾರಿಗೆ ಗೀತಂ ವಿವಿ ಸೆಕ್ಯುರಿಟಿ ಕಿರಿಕ್.. ರಾಜಘಟ್ಟರವಿ ವಾರ್ನಿಂಗ್#LatestUpdates #Gitamvv pic.twitter.com/KNcChcuIL6
— Harithalekhani (@harithalekhani) February 7, 2025
ಸೆಕ್ಯುರಿಟಿ ಕೆಲಸ ಏನಿದ್ದರೂ ವಿಶ್ವವಿದ್ಯಾಲಯದ ರಕ್ಷಣೆ ಸೀಮಿತವೇ ಹೊರತು ಬಡವರ ಮೇಲೆ ದೌರ್ಜನ್ಯ ಮಾಡುವುದಕ್ಕಲ್ಲ. ಇದು ಆಡಳಿತ ಮಂಡಳಿಗೆ ತಿಳಿದಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಬಡ ವ್ಯಾಪಾರಿಗೆ ತೊಂದರೆ ಉಂಟು ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜಘಟ್ಟ ರವಿ ಎಚ್ಚರಿಕೆ ನೀಡಿದರು.
ಈ ವೇಳೆ ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಮಂಜುನಾಥ್, ನ್ಯಾಯವಾದಿ ಮುನಿರಾಜು, ಕರವೇ ಮುಖಂಡರಾದ ಸುಬ್ರಮಣಿ, ಹಮಾಮ್ ಚಂದ್ರು ಮತ್ತಿತರಿದ್ದರು.