ದೊಡ್ಡಬಳ್ಳಾಪುರ (Doddaballapura): ತ್ಯಾಗ, ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಶ್ರೀ ಮಹಾವೀರರ ಜಯಂತಿಯನ್ನು ತಾಲೂಕಿನಲ್ಲಿ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು.
ಜೈನ ಸಮುದಾಯದವರಿಂದ, ಮಹಾವೀರ ಜಯಂತಿಯನ್ನಯ ಮಹಾವೀರ ಜನ್ಮ ಕಲ್ಯಾಣ ದಿನವನ್ನಾಗಿ ಆಚರಿಸಲಾಯಿತು.
ಇದರ ಅಂಗವಾಗಿ ನಗರದ ಆಸ್ಪತ್ರೆ ವೃತ್ತದ ಬಳಿಯಿರುವ ಶ್ರೀ ಮಹಾವೀರ ಜೈನ ಶ್ವೇತಾಂಬರ್ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ನಡೆದ ಸಾಮೂಹಿಕ ಭಜನೆಯಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಮಹಾವೀರರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ನಗರದ ಬಸ್ ನಿಲ್ದಾಣದಲ್ಲಿ ಜೈನ ಸಮುದಾಯದಿಂದ ಪ್ರಸಾದ, ಪಾನಕ ವಿತರಣೆ, ಲಯನ್ಸ್ ಕ್ಲಬ್ನ ಡಯಾಲಿಸಿಸ್ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ಗೆ ಪ್ರಾಯೋಜನೆ ಮೊದಲಾದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.