ದೊಡ್ಡಬಳ್ಳಾಪುರ: ಸರ್ಕಾರದ ಯೋಜನೆ ಗಳು ಸೇರಿದಂತೆ ರೈತರಿಗೆ ಅಗತ್ಯ ಕೃಷಿ ಕ್ಷೇತ್ರದ ಸಮಗ್ರ ಮಾಹಿತಿ ನೀಡುವುದರ ಮೂಲಕ ರಾಜ್ಯಾದ್ಯಂತ ಕೃಷಿ ಮಿತ್ರ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ಆರಂಬಿಸಿದೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಟಿ.ಬಿ ವೃತ್ತದ ಸಮೀಪ ಕೃಷಿ ಮಿತ್ರ ಸಂಸ್ಥೆಯ ನೂತನ ಪ್ರಾದೇಶಿಕ ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ರೈತರ ಅಭಿವೃದ್ಧಿ ಗೆ ಪೂರಕ ಯೋಜನೆಗಳನ್ನು ರೂಪಿಸುತ್ಯಿರುವುದು ಒಳ್ಳೆಯ ಬೆಳವಣಿಗೆ ಎಂದರು.
ನಂತರ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷ ಕೆ.ಎನ್.ಸಿ ಸುರೇಶ್ ಮಾತನಾಡಿ, ರೈತರ ಬದುಕು ಕಷ್ಟಕರವಾಗಿದ್ದು, ಶ್ರಮದ ಕೆಲಸ ಮಾಡಿದರು ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ದೇಶದ ಬೆಳವಣಿಗೆ ಯಲ್ಲಿ ರೈತರ ಪಾಲುದಾರಿಕೆ ಹೆಚ್ಚಾಗಿರುವ ಕಾರಣ ಸರ್ಕಾರ ಪೂರಕ ಯೋಜನೆ ರೂಪಿಸಬೇಕು. ಸಾಮನ್ಯ ಜನರಷ್ಟೆ ರೈತರಿಗೂ ಕಾನೂನಿನ ನೆರವು ತನ್ನ ಹಕ್ಕುಮತ್ತು ಕರ್ತವ್ಯಗಳನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಸಂಘ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಕೃಷಿ ಮಿತ್ರ ಸಂಸ್ಥೆಯ ಅಧ್ಯಕ್ಷ ರೋಹನ್ಗೌಡ ಮಾತನಾಡಿ, ನಮ್ಮ ಸಂಸ್ಥೆಯ ಈಗಾಗಲೆ ರಾಜ್ಯಾದ್ಯಂತ ಕೆಲಸ ಮಾಡಲು ಆರಂಭಿಸಿದ್ದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯಲ್ಲಿ ಕಾರ್ಡ ನೋಂದಣಿ ಕೆಲಸ ಮಾಡಲಾಗುತಿದೆ. ರೈತರಿಗೆ ಸಮಯಕ್ಕೆ ಬೇಕಾದ ಸೂಕ್ತ ಮಾಹಿತಿ ಹಾಗೂ ಅಗತ್ಯ ಪರಿಕರಗಳನ್ನು ನೀಡಲು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಆರಂಭಿಸಿದ್ದು
ಸಿಬ್ಬಂದಿಗಳನ್ನು ನೇಮಿಸಲಾಗುವುದು. ನಿಖರ ಹಾಗೂ ನಿರಂತರ ಮಾಹಿತಿ ನೀಡುವುದರ ಜತೆ ಸ್ಥಳೀಯ ಮಟ್ಟದಲ್ಲಿ ರೈತ ಕ್ಷೇತ್ರದ ಕಾರ್ಯಗಾರ ಆಯೋಜಿಸಲಾಗುವುದು ಇದರ ಪ್ರಯೋಜನವನ್ನು ರೈತರು ಪಡೆದು ಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್, ಕೃಷಿಮಿತ್ರ ಸಂಸ್ಥೆಯ ನಿರ್ದೇಶಕ ಪ್ರದೀಪ್ ಕುಮಾರ್.ಆರ್. ಮೇಲ್ವಿಚಾರಕರಾದ ಕೆ.ಎಂ ರವಿಕುಮಾರ್, ನಾರಾಯಣಸ್ವಾಮಿ, ಪ್ರಮೀಳ, ರಾಧಿಕ, ಲೀಲಾವತಿ, ಗಂಗರಾಜು, ಪವನ್ಕುಮಾರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……