ಹೈದರಾಬಾದ್: ಆರು ತಿಂಗಳಿನಿಂದ ಎಡಗೈ ಭುಜದ ನೋವಿನಿಂದ ಬಳಲುತಿದ್ದ ತೆಲುಗು ಚಿತ್ರ ರಂಗದ ಖ್ಯಾತ ನಟ ಬಾಲಕೃಷ್ಣ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅ.31ರಂದು ನೋವು ತೀವ್ರವಾದ ಕಾರಣ ಬಂಜಾರ ಹಿಲ್ಸ್ ನ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರಮುಖ ಆರ್ಡಿಪಿಡಿಕ್ ಸರ್ಜನ್ ಡಾ.ರಘುವೀರ್ ರೆಡ್ಡಿ, ಡಾ.ಬಿ.ಎಸ್.ಪ್ರಸಾದ್ ತಂಡ ನಾಲ್ಕು ಗಂಟೆಗಳ ನಿರಂತ ಶ್ರಮಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದ ಬಾಲಕೃಷ್ಣ ಅವರನ್ನು ಮಂಗಳವಾರ ಸಂಜೆ ಅಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……