ನವದೆಹಲಿ, (ಜುಲೈ.29): ಭಾರತದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ವಾಟ್ಸಾಪ್ ಆಗಲಿ ಅಥವಾ ಮೂಲ ಸಂಸ್ಥೆ ಮೆಟಾ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದವಿವೇಕತಂಖಾ ಅವರು, ‘ಭಾರತದ ಐಟಿ ಕಾಯ್ದೆ ಯನ್ನು ಒಪ್ಪಲ್ಲ ಎಂದು ಈ ಹಿಂದೆ ವಾಟ್ಸಾಪ್ ಹೇಳಿತ್ತು. ಹೀಗಾಗಿ ವಾಟ್ಸಾಪ್ ತನ್ನ ಸೇವೆ ಸ್ಥಗಿತಗೊಳಿಸುತ್ತದೆಯೇ’ ಎಂದು ಕೇಳಿದ್ದರು.
ಇದಕ್ಕೆ ಉತ್ತರಿಸಿದ ವೈಷ್ಣವ್ ಈ ಬಗ್ಗೆ ಸರ್ಕಾರಕ್ಕೆ ವಾಟ್ಸಾಪ್ ಯಾವುದೇ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….