ದೊಡ್ಡಬಳ್ಳಾಪುರ, (ಜುಲೈ.29): ತಾಲ್ಲೂಕಿನ ಮೇಡಹಳ್ಳಿ ಗ್ರಾಮದ ಹೆಸರಾಂತ ತಬಲವಾದಕ 40 ವರ್ಷದ ವೆಂಕಟೇಶ್ ಅವತು ಸೋಮವಾರ ನಿಧನರಾಗಿದ್ದಾರೆ.
ತಾಲ್ಲೂಕು ಕಲಾವಿದರ ಸಂಘದಲ್ಲಿ ಸಂಕ್ರಿಯರಾಗಿದ್ದ ವೆಂಕಟೇಶ್ ಅವರು ಹಲವಾರು ಪೌರಾಣಿಕ ಹಾಗೂ ಹರಿಕತೆಗಳಿಗೆ ತಬಲ ನುಡಿಸುವ ಮೂಲಕ ಸಂಗೀತಾ ಆಸಕ್ತರ ಮೆಚ್ಚುಗೆ ಪಡೆದಿದ್ದರು.
ಮೃತರಿಗೆ ಪತ್ನಿ, ಒಬ್ಬ ಪುತ್ರಿ ಇದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಮೇಡಹಳ್ಳಿ ಗ್ರಾಮದಲ್ಲಿ ನಡೆಯಿತು ಎಂದು ಮಿತ್ರರು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….