ಬಸವ ಭವನದಿಂದ ಇಸ್ಲಾಂಪುರದವರೆಗಿನ ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಡಿ.ಸಿ.ಶಶಿಧರ್ ಆಗ್ರಹ / ರತ್ನಮ್ಮಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸರ್ವ ಸದಸ್ಯರ ಸಭೆ

ದೊಡ್ಡಬಳ್ಳಾಪುರ: ನಗರದಲ್ಲಿ ಬಸವ ಭವನದಿಂದ ಇಸ್ಲಾಂಪುರದವರೆಗಿನ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಜನ ತಿರುಗಾಡುವ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಡಾಂಬರು ಹಾಕಿದ ಎರಡೇ ವಾರದಲ್ಲಿ ಮತ್ತೆ ಕಿತ್ತು ಹೋಗಿದೆ. ತಜ್ಞರಿಂದ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್ ಆಗ್ರಹಿಸಿದರು. 

ಅವರು ಮಂಗಳವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮಜಯರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಸುಮಾರು ಎರಡು ವರ್ಷಗಳಿಂದಲು ಸಹ ಈ ರಸ್ತೆಯ ಕೆಲಸ ನಡೆಯುತ್ತಲೇ ಇದೆ. ಕಾಮಗಾರಿ ಮಾತ್ರ ಇನ್ನು ಪೂರ್ಣವಾಗಿಲ್ಲ. ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಮಳೆ ನೀರು ಚರಂಡಿಗಳು ಅವೈಜ್ಞಾನಿಕವಾಗಿದ್ದು ಅಲ್ಪಸ್ವಲ್ಪ ಮಳೆಯಾದರು ಚರಂಡಿಯಲ್ಲಿ ಹೋಗುವುದಕ್ಕಿಂತಲು ಹೆಚ್ಚಿನ ಮಳೆ ನೀರು ರಸ್ತೆ ಮೇಲೆಯೇ ಹರಿದು ಹೋಗುತ್ತಿವೆ. ಹೀಗಾದರೆ ರಸ್ತೆ ಎಷ್ಟು ದಿನ ಬಾಳಿಕೆ ಬರಲು ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ ಅವರು ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮಾಡುವ ಮುನ್ನ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು ಎಂದರು.

ಸದಸ್ಯ ಕಣಿವೇಪುರ ಸುನಿಲ್ ಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಯ ಬದಿಯಲ್ಲಿ ಸಾಕಷ್ಟು ಮರಗಳು ಒಣಗಿ ನಿಂತಿದ್ದು ಜೋರಾಗಿ ಮಳೆ,ಗಾಳಿ ಬಂದರೆ ಮುರಿದು ಬೀಳುತ್ತಿವೆ. ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಒಣಗಿ ನಿಂತಿರುವ ಮರಗಳು ಹಾಗೂ ರಸ್ತೆ ಮೇಲೆ ಬಂದಿರುವ ದೊಡ್ಡ ರಂಬೆಗಳನ್ನು ತೆರವುಗೊಳಿಸಬೇಕು ಎಂದರು.

ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಸದಸ್ಯ ಜಿ.ಶಂಕರಪ್ಪ, ತಾಲ್ಲೂಕಿನಲ್ಲಿ 78 ಅಂಗನವಾಡಿಗಳ ದುರಸ್ಥಿ ಹಾಗೂ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಕಾಮಗಾರಿ ಆರಂಭವಾಗಿ 2018-19ನೇ ಸಾಲಿನಲ್ಲೇ ಗುತ್ತಿಗೆ ನೀಡಿದ್ದರು ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅಂಗನವಾಡಿಗಳಲ್ಲಿ ಬೇಸಿಗೆಯಲ್ಲಿ ಮಕ್ಕಳಿಗೆ ಫ್ಯಾನ್ ಸೌಲಭ್ಯ, ಆನ್ಕಲಿಯಂತಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಹಣ ನೀಡಿದ್ದರು ಕೆಲಸ ಮಾತ್ರ ಮಾಡದೇ ಇರುವುದು ಸರಿಯಾದ ಕ್ರಮ ಅಲ್ಲ. ಈಗ ಮತ್ತೆ ಇದೇ ಅಂಗನವಾಡಿಗಳಿಗೆ 2020-21ನೇ ಸಾಲಿನಲ್ಲಿ ಅನುದಾನ ಏಕೆ ನೀಡಬೇಕು ಎಂದು ಪ್ರಶ್ನಿಸಿದರು.

ಅಕ್ಕತಮ್ಮನಹಳ್ಳಿ, ಭೂಚನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.ಕೊಳವೆ ಬಾವಿಗಳು ಇದ್ದರು ಸಹ ಮೋಟರ್ ಅಳವಡಿಸದೆ ಇರುವುದು ತೊಂದರೆಯಾಗಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಕುಡಿಯುವ ನೀರಿನ ಬವಣೆ ನೀಗಿಸಬೇಕು ಎಂದು ಸದಸ್ಯರಾದ ಯಶೋಧಮ್ಮ ಆಗ್ರಹಿಸಿದರು.

ನಗರದ ಅಂಚಿನಲ್ಲೇ ಇರುವ ಪಾಲನಜೋಗಹಳ್ಳಿಯಲ್ಲಿ ಜನ ಸಂಖ್ಯೆಯು ಹೆಚ್ಚಾಗಿದೆ. ಈ ಭಾಗದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಬೇಕು. ಅಲ್ಲದೆ ಈಗಾಗಲೇ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ಮೋಟರ್ ಅಳವಡಿಸಿ ನೀರು ಸರಬರಾಜು ಆರಂಭಿಸಬೇಕು ಎಂದು ಸದಸ್ಯ ಹಸನ್ಘಟ್ಟರವಿ ಮನವಿ ಮಾಡಿದರು. 

ತೋಟಗಾರಿಕೆ ಇಲಾಖೆ ಸಹಕಾಯ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಲಾಕ್ಡೌನ್ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಹೂವು ಬೆಳೆಗಾರರಿಗೆ ₹21.58 ಲಕ್ಷ ನೆರವನ್ನು ರಾಜ್ಯ ಸರ್ಕಾರ ಆನ್ಲೈನ್ಮೂಲಕ ಹೂವು ಬೆಳೆಗಾರ ರೈತರ ಖಾತೆಗಳಿಗೆ ಜಮೆ ಮಾಡಿದೆ. ಪಹಣಿಯಲ್ಲಿ ಹೂವು ಬೆಳೆ ನಮೋದು ಆಗದೆ ಇರುವ ರೈತರಿಗೆ ಇನ್ನು ಪರಿಹಾರ ಬಂದಿಲ್ಲ. ಬಾಳೆ ಬೆಳೆಗೆ ನೀಡಲಾಗುವ ಪ್ರೋತ್ಸಾಹಕ್ಕೆ ಈಗಷ್ಟೆ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಲ್ಲದೆ ಶಾಲೆ, ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ತರಕಾರಿ ಕೈ ತೋಟಗಳನ್ನು ಅಭಿವೃದ್ಧಿಪಡಿಸಿಕೊಡುವ ಯೋಜನೆ ಜಾರಿಗೆ ಬಂದಿದೆ. ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಕೈ ತೋಟ ಅಭಿವೃದ್ಧಿ ಪಡಿಸಿಕೊಡಲಾಗುವುದು.ಇದಲ್ಲದೆ ಈ ಬಾರಿ ಮಿನಿ ಟ್ರ್ಯಾಕ್ಟರ್, ಹೂವು, ಹಣ್ಣುಗಳ ಸಂಗ್ರಹಕ್ಕೆ  ಅಗತ್ಯ ಇರುವ ಶೀತಲ ಕೊಠಡಿಗಳ ನಿರ್ಮಾಣ ಸೇರಿದ ವಿವಿಧ ಯೋಜನೆಗಳ ಕುರಿತಂತೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.     

ಕೃಷಿ ಇಲಾಖೆ ತಾಲ್ಲೂಕು ಸಹಕಾಯ ನಿರ್ದೇಶಕಿ ಸುಶೀಲಮ್ಮ ಮಾತನಾಡಿ, ನೀಲಗಿರಿ ತೆರವಿನಿಂದಾಗಿ ಈ ಬಾರಿ ರಾಗಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಅಲ್ಲದೆ ಹದವಾಗಿ ಮಳೆಯು ಆಗಿದೆ. ಇಡೀ ರಾಜ್ಯದಲ್ಲಿ ಸ್ವಯಂ  ಬೆಳೆ ಸಮೀಕ್ಷೆ ನಡೆಯುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗನ್ನು ಮೊಬೈಲ್ ಮೂಲಕ ಆಪ್ಲೋಡ್ ಮಾಡಬೇಕು. ಪಹಣಿಯಲ್ಲಿ ಬೆಳೆ ನಮೋದಾಗಿದ್ದರೆ ಮಾತ್ರ ಸರ್ಕಾರದ ಸೌಲಭ್ಯ ಅಥವಾ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿಗೆ ಸಾಧ್ಯವಾಗಲಿದೆ. ಸ್ವಯಂ ಬೆಳೆ ಸಮೀಕ್ಷೆಯ ಅವಧಿಯನ್ನು ಇನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಅರಣ್ಯ ಅಧಿಕಾರಿ ಲಕ್ಷ್ಮೀನಾರಾಯಣ್ ಸಭೆಗೆ ಮಾಹಿತಿ ನೀಡಿ, ತಾಲ್ಲೂಕಿನ ವಿವಿಧ ಕೆರೆ ಅಂಗಳದಲ್ಲಿ ದಟ್ಟವಾಗಿ ಬೆಳೆದಿದ್ದ ಜಾಲಿ ಮರಗಳು ಅಂತರ್ಜಲಕ್ಕೆ ಹಾನಿಯುಂಟು ಮಾಡುತ್ತಿವೆ ಎನ್ನುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹರಾಜು ನಡೆಸಲಾಗಿತ್ತು.ಹರಾಜಿನಿಂದ ಬಂದ ಶೇ 50 ರಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಗೆ ನೀಡಿಲ್ಲ.ಇದರಿಂದಾಗಿ ಗ್ರಾಮ ಪಂಚಾಯಿತಿಗಳಿಗೆ ಅರಣ್ಯ ಇಲಾಖೆವತಿಯಿಂದ ನೀಡಲಾಗುವ ಸೌಲಭ್ಯಗಳು ಇಲ್ಲದಾಗಲಿವೆ. ಅರಳುಮಲ್ಲಿಗೆ ಕೆರೆಯ ₹13 ಲಕ್ಷ, ತಿರುಮಗೊಂಡನಹಳ್ಳಿ ಗ್ರಾಮದ ಕೆರೆಯ ₹16 ಲಕ್ಷ, ಹೊಸಹಳ್ಳಿ ಕೆರೆಯ  ₹2 ಲಕ್ಷ ಹಾಗೂ ಹಣಬೆ ಕೆರೆಯ 11 ಲಕ್ಷ ಬಾಕಿ ಹಣವನ್ನು ತಕ್ಷಣ ಅರಣ್ಯ ಇಲಾಖೆಗೆ ಪಾವತಿಸಬೇಕು ಎಂದರು. 

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಸಾಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮರಾಮಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಇದ್ದರು.  

ಹರಿತಲೇಖನಿ ಕಂಡ ಸಭೆಯ ವಿಶೇಷ

1

‘ಯಾವುದಾದರು ಭಾಗ್ಯ ಇದ್ದರೆ ತಿಳಿಸಿ’ ಪಶು ಇಲಾಖೆಯಿಂದ ರಾಸುಗಳ ರೋಗ ತಡೆಗೆ ಲಸಿಕೆಗಳನ್ನು ಹಾಕಿಸುವ ಕುರಿತಂತೆ ಸಭೆಗೆ ಮಾಹಿತಿ ನೀಡುವುದೇ ಇರುತ್ತದೆ. ರೈತರಿಗೆ ಕೊಡುವಂತಹ ಯಾವುದಾದರು ಭಾಗ್ಯದ ಯೋಜನಗಳು ಇದ್ದರೆ ತಿಳಿಸಿ ವೈದ್ಯರೆ ಎಂದು ಸದಸ್ಯರಾದ ಶ್ರೀವತ್ಸ ಅವರು ಕೇಳುತಿದ್ದಂತೆ ಸಭೆಗೆ ಉತ್ತರ ನೀಡಲು ಎದ್ದು ನಿಂತ ಪಶು ಇಲಾಖೆಯ ವಿಧ್ಯಾ ಡಾ.ವಿಶ್ವನಾಥ್ ಕ್ಷಣ ಕಾಲ ತಬ್ಬಿಬ್ಬಾಗುವಂತಾಯಿತು.

2

ಮಹಿಳೆಯರು ಮನೆಯಲ್ಲಿ ಜೋರು ಮಾಡುತ್ತೀರ. ಆದರೆ ಸಭೆಯಲ್ಲಿ ಮಾತ್ರ ಏನು ಮಾತನಾಡುವುದೇ ಇಲ್ಲ. ಹೀಗಾದರೆ ನಿಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಬಗೆಹರಿಯುವುದಾದರು ಹೇಗೆ. ಮಹಿಳಾ ಸದಸ್ಯರು ಮಾತನಾಡಬೇಕು ಎಂದು ಸದಸ್ಯ ಜಿ.ಶಂಕರಪ್ಪ ಹೇಳುತ್ತಿದ್ದಂತೆ ಮಹಿಳಾ ಸದಸ್ಯರು ಒಬ್ಬೊಬ್ಬರಾಗಿ ಮಾತನಾಡಲು ಆರಂಭಿಸಿದರು.

ರಾಜಕೀಯ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಹಾನಿಯ ಸಂಭವವಿದೆ ಎಚ್ಚರ

ರಾಹುಕಾಲ: 01:30PM ರಿಂದ 3:00PM, ಗುಳಿಕಕಾಲ: 09:00AM ರಿಂದ 10:30AM, ಯಮಗಂಡಕಾಲ: 06:00AM ರಿಂದ 07:30AM, Astrology

[ccc_my_favorite_select_button post_id="115027"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!