ಬೆಂ.ಗ್ರಾ.ಜಿಲ್ಲೆ; ಕುವೆಂಪುರವರ 117ನೇ ಜನ್ಮ ದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆನ್ಲೈನ್ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರು ಕುವೆಂಪುರವರ ಜೀವನ, ಶಿಕ್ಷಣ, ಬದುಕು, ಬರಹಗಳನ್ನು ಪರಿಚಯಿಸಿ ವಿಶ್ವಮಾನವ ಸಂದೇಶದ ತಂತ್ರಗಳನ್ನು ತಿಳಿಸಿಕೊಟ್ಟು ಮಕ್ಕಳಲ್ಲಿ ಶ್ರದ್ಧಾಭಕ್ತಿ ಗೌರವ ಇರಬೇಕು, ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಇದು ಈಗಿನ ಕಾಲದ ಪ್ರಸ್ತುತ ಅಂಶವಾಗಿದೆ. ಕುವೆಂಪುರವರು ಕೇವಲ ಕವಿಯಾಗಿ, ಓದುಗರಾಗಿ ನಿಲ್ಲದೆ ಸಮಾಜಮುಖಿ ಅಂಶವಾಗಿ ವಿಚಾರಶೀಲತೆ, ಸಾಧಾರಣ ದೃಷ್ಟಿಕೋನ ಮೊದಲಾದ ಕ್ರಾಂತಿಕಾರಿ ಸಾಹಿತಿ ವ್ಯಕ್ತಿಯಾಗಿ ನಾಡಿನ ಗನತೆಯನ್ನು ಎತ್ತಿಹಿಡಿದಿದ್ದಾರೆ ಇದೇ ಮಾದರಿಯಲ್ಲಿ ಮನುಜಮತ, ವಿಶ್ವಪಥ,ಸರ್ವೋದಯ ಇತ್ಯಾದಿಗಳ ಅನುಸರಣೆಯ ಪಾಲನೆಯಾಗಾಗಿ ಮಕ್ಕಳು ಸದೃಢರಾಗಬೇಕು ಎಂದು ತಿಳಿಸಿದರು.
ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರಿಗೆ ಸಾದಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪ್ರತಿಮಾ, ವಿಜಯಲಕ್ಷ್ಮಿ, ನವೀನ್ ಕುಮಾರ್ ಕುವೆಂಪುರವರ ಭಾವಗೀತೆ ಹಾಡಿ ನಮನ ಸಲ್ಲಿಸಿ ಮೆರಗು ತಂದರು.
ಇದೇ ವೇಳೆ ಛಲಪತಿ ರವರು ಕುವೆಂಪುರವರು ರಚಿಸಿದ ಸೋವಿಯತ್ ರಷ್ಯಾ ಕೃತಿಯಲ್ಲಿನ ಯುವಕರ ವೈಚಾರಿಕ ಕವನವನ್ನು ವಾಚಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಆಯೋಜಕ ಚಿಕ್ಕೇಗೌಡ ಹಾಗೂ ಮಕ್ಕಳೆಲ್ಲ ಸೇರಿ ದೀಕ್ಷ ಗೀತೆ ನಾಡ ಗೀತೆ ರಾಷ್ಟ್ರಗೀತೆ ಹಾಡಿದರು.
ಬಿಜ್ಜವಾರ ಸ.ಪ್ರೌ.ಶಾಲೆಯ ಶಾರದಾ ಬಾಯಿ ಅಂಗಡಿ ಕಾರ್ಯಕ್ರಮದ ಉದ್ದೇಶ ಹಾಗೂ ಮೂಲ ಸಂದೇಶವನ್ನು ತಿಳಿಸಿ ಕುವೆಂಪುರವರ ಜೀವಮಾನದ ಸಾಧನೆಯನ್ನು ವಿವರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….