ಚಿರತೆ ಆತಂಕ News Updates: ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ / ಚಿರತೆ ಸೆರೆಗೆ ಬೋನ್ ಅಳವಡಿಕೆಯ ಭರವಸೆ

ದೊಡ್ಡಬಳ್ಳಾಪುರ, (ಡಿ.28): ನಗರದ ಹೊರವಲಯದಲ್ಲಿರುವ ಕುರುಬರಹಳ್ಳಿ ಸಮೀಪದ ತಳಗವಾರ ರಸ್ತೆಯಲ್ಲಿ, ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅಧಿಕಾರಿಗಳು, ಮತ್ತೆ ಚಿರತೆ ಕಂಡು ಬಂದಲ್ಲಿ ಬೋನ್ ಅಳವಡಿಸಿ, ಸೆರೆ ಹಿಡಿಯಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹರಿತಲೇಖನಿಗೆ ಮಾಹಿತಿ ನೀಡಿದ್ದು, ಚಿರತೆಗಳು  ವಲಸೆ ನೆಡೆಸುವ ವೇಳೆ, ಕುಡಿಯುವ ನೀರಿಗಾಗಿ ಗ್ರಾಮದ ಹೊರವಲಯದಲ್ಲಿನ ಜಮೀನುಗಳ ಬಳಿ ಕಂಡು ಬರುತ್ತವೆ.

5 ಕಡೆ ಬೋನ್: ತಾಲೂಕಿನ ಆಲೇನಹಳ್ಳಿ, ಚೆನ್ನಾಪುರ, ರಾಷ್ಟ್ರೋತ್ಥಾನ ಗೋಶಾಲೆ ಹಾಗೂ ಸಾಸಲು ಹೋಬಳಿಯ ಎರಡು ಕಡೆ ಸೇರಿ ಒಟ್ಟು ಐದು ಕಡೆಗಳಲ್ಲಿ ಚಿರತೆ ಸೆರೆಗೆ ಬೋನ್ ಅಳವಡಿಸಲಾಗಿದೆ. ಕೊನಘಟ್ಟದ ಬಳಿ ಬೋನ್ ಅಳವಡಿಕೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಇಂದು ಕುರುಬರಹಳ್ಳಿ ಬಳಿ ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, ಮತ್ತೆ ಕಂಡು ಬಂದರೆ ತಿಳಿಸುವಂತೆ ಸೂಚನೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಬುಧವಾರ ಬೆಳಗ್ಗೆ ಕಾಂಗ್ರೆಸ್ ಯುವ ಮುಖಂಡ ತಳಗವಾರ ಪುನೀತ್ ಈ ಕುರಿತಂತೆ ಮಾಹಿತಿ ನೀಡಿದ್ದು, ಕುರುಬರಹಳ್ಳಿ ಸಮೀಪದ ತಳಗವಾರ ರಸ್ತೆ ಮಾರ್ಗದಲ್ಲಿನ ಆಲೆಮನೆ ಸಮೀಪದ ಕೃಷಿ ಹೊಂಡದ ಬಳಿ ಎರಡು ಚಿರತೆಗಳು ಸಾಗುತ್ತಿದ್ದವು. ವಾಕಿಂಗ್ ತೆರಳಿದ್ದ ಕಾರಣ ಮೊಬೈಲ್ ಇರದ ಕಾರಣ ಪೊಟೋ ತೆಗೆಯಲಾಗಲಿಲ್ಲ. ಚಿರತೆಯಿಂದ ಈ ವ್ಯಾಪ್ತಿಯ ಜನ – ಜಾನುವಾರುಗಳು ತೊಂದರೆಗುವ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಘಾಟಿ ಸುಬ್ರಹ್ಮಣ್ಯ ರಸ್ತೆ, ಕೊನಘಟ್ಟ ಜಮೀನಿನಲ್ಲಿ ಹೆಜ್ಜೆ ಗುರುತು, ಕೊನಘಟ್ಟ ಯುವಕನ ಮೇಲೆ ದಾಳಿಗೆ ಯತ್ನ. ಇದೀಗ ನಗರಕ್ಕೆ ಹೊಂದಿಕೊಂಡಂತಿರುವ ಕುರುಬರಹಳ್ಳಿ ಬಳಿ ಚಿರತೆಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!