ದೊಡ್ಡಬಳ್ಳಾಪುರ, (ನ.01); ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಕನ್ನಡ ಅಭಿಮಾನದ ಭಾಷೆ, ವಲಸೆ ಬಂದಿರುವ ಅನ್ಯಭಾಷಿಕರಿಗೆ ಕನ್ನಡ ಪ್ರೇಮವನ್ನು ಬೆಳೆಸಬೇಕು ಹೊರರಾಜ್ಯದೊಳಗೆ ಕನ್ನಡದಲ್ಲಿ ಮಾತನಾಡಿಸಿ ಕನ್ನಡವನ್ನು ಕಲಿಸುವಂತಾಗಬೇಕಿದೆ.
ಬೇರೆ ರಾಜ್ಯಗಳಲ್ಲಿ ಅವರ ಮಾತೃಭಾಷೆ ಬಿಟ್ಟು ಅನ್ಯ ಭಾಷೆಯನ್ನು ಬಳಸುವುದಿಲ್ಲ. ಆದ್ದರಿಂದ ಅವರ ಭಾಷೆಯ ಉಳಿವಿಗೆ ಹೋರಾಟ ಅಗತ್ಯವಿಲ್ಲ. ಆದರೆ ನಾವು ಇಂದಿಗೂ ನಾಡು ನುಡಿಯ ಬಗ್ಗೆ ನಿರಂತರ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರಾಂಶುಪಾಲರಾದ ಡಾ.ಬಿ.ವಿಜಯ್ ಕಾರ್ತಿಕ್ ಮಾತನಾಡಿ, ಮೈಸೂರ್ ರಾಜ್ಯ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷ ಆದ್ದರಿಂದ ಇವತ್ತು ನಾವು ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕನ್ನಡ ಅಭಿಮಾನವನ್ನು ನವೆಂಬರ್ ತಿಂಗಳಲ್ಲಿ ಮಾತ್ರ ಸೀಮೀತವಾಗಿರದೆ ಇಡೀ ವರ್ಷ ಕನ್ನಡ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷ ರಾಕೇಶ್, ಐಟಿಐ ಪ್ರಾಂಶುಪಾಲರಾದ ರವಿ, ಮೆಕ್ಯಾನಿಕಲ್ ಮುಖ್ಯಸ್ಥರಾದ ಡಾ.ಸುನಿಲ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಾಪೀರ್, ಮನ್ಸೂರ್, ಪ್ರಭಾಕರ್ ಮತ್ತಿತರರಿದ್ದರು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….