ಕಾನ್ಪುರ್, (ನ.01): ಪತ್ನಿ ಹುಬ್ಬು ಶೇಪ್ (Eyebrows) ಮಾಡಿಸಿಕೊಂಡಿರುವ ಬಗ್ಗೆ ವೀಡಿಯೋ ಕಾಲ್ ಮೂಲಕ ತಿಳಿದ ಪತಿ ಸೌದಿ ಅರೇಬಿಯಾದಿಂದಲೇ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದ ಗುಲ್ಫ್ಬಾ ಅವರು 2022ರ ಜನವರಿಯಲ್ಲಿ ಸಲೀಂ ಎಂಬಾತನನ್ನು ವಿವಾಹವಾಗಿದ್ದರು. ಸಲೀಂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಸೌದಿ ಅರೇಬಿಯಾದಲ್ಲಿರುವ ಸಲೀಂ, ತನ್ನ ಪತ್ನಿಗೆ ಕರೆ ಮಾಡಿದ್ದಾನೆ. ಆಗ ಪತ್ನಿ ಐ ಬ್ರೋ ಮಾಡಿಸಿಕೊಂಡಿರುವುದನ್ನು ವೀಡಿಯೋ ಕಾಲ್‌ನಲ್ಲಿ ಗಮನಿಸಿದ್ದಾನೆ. ಇದರಿಂದಾಗಿ ಕೋಪಗೊಂಡು ಫೋನ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾನೆ. ಆ ಬಳಿಕ ಮಹಿಳೆ ಹಲವು ಬಾರಿ ತನ್ನ ಪತಿಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿಲ್ಲ.
ಘಟನೆ ಹಿನ್ನೆಲೆಯಲ್ಲಿ ಗುಲ್ಬಬಾ ಪತಿ, ಅತ್ತೆ, ಮಾವ ಸೇರಿದಂತೆ ಐವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ನನ್ನ ಪತಿ ಸ್ವಲ್ಪ ಹಳೆ ಫ್ಯಾಷನ್‌ನವರು. ನಾನು ಮೇಕಪ್ ಮಾಡುವುದು ಮತ್ತು ಬ್ಯೂಟಿ ಪಾರ್ಲ‌್ರಗೆ ಹೋಗುವುದು ಅವರಿಗೆ ಇಷ್ಟವಿಲ್ಲ ನಾನು ಐ ಬ್ರೋ ಮಾಡಿಸಿಕೊಂಡಿದ್ದರಿಂದ ಅವರಿಗೆ ಸಿಟ್ಟು ಬಂದಿತ್ತು. ಆಮೇಲೆ ಸರಿ ಆಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಇನ್ನೊಮ್ಮೆ ಅವರೊಂದಿಗೆ ಮಾತನಾಡಿದಾಗ ಈ ವಿಚಾರವಾಗಿ ಜಗಳ ಆರಂಭಿಸಿ ನಾನು ನಿನಗೆ ತ್ರಿವಳಿ ತಲಾಖ್ ನೀಡುತ್ತಿದ್ದೇನೆ ಎಂದಿದ್ದರು. ಇದಾದ ಬಳಿಕ ಫೋನ್ ಡಿಸ್ಕನೆಕ್ಟ್ ಮಾಡಿದ್ದಾರೆ.
ನಾನು ಅವರಿಗೆ ಆ ಬಳಿಕ ಹಲವಾರು ಬಾರಿ ಕರೆ ಮಾಡಿದೆ, ಆದರೆ ಅವನು ನನ್ನ ಕರೆಯನ್ನು ಸ್ವೀಕರಿಸಲಿಲ್ಲ ನಂತರ ನಾನು ಈ ಬಗ್ಗೆ ನನ್ನ ಅತ್ತೆಯ ಬಳಿ ಮಾತನಾಡಿದಾಗ ಅವರೂ ನನ್ನ ಪತಿಯನ್ನು ಬೆಂಬಲಿಸಲು ಪ್ರಾರಂಭಿಸಿದರು. ನಮ್ಮ ಮಗ ಏನೇ ಮಾಡಿದರೂ ಸರಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನನ್ನ ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….