ಕೊರಟಗೆರೆ, (ನ.01): ಸಂಭ್ರಮದಿಂದ ನಡೆಯಬೇಕಾದ ಕನ್ನಡ ರಾಜ್ಯೋತ್ಸವದ ತಾಲೂಕು ಆಡಳಿತ ಬೇಜವಬ್ದಾರಿಯಿಂದ ಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ ಆಕ್ರೋಶ ಹೊರಹಾಕಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ನಡೆಸಿತು. ಆದರೆ, ತಹಶೀಲ್ದಾರ್‌ರವರಿಂದ ಧ್ವಜಾರೋಹಣಾದ ಬಳಿ ನೀಡಬೇಕಿದ್ದ ಸಂದೇಶವನ್ನು ವೇದಿಕೆಯಲ್ಲಿ ನೀಡಿದ ಕಾರಣ ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ ತಾಲೂಕು ಮಟ್ಟದ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮದ ನಿಯಮವನ್ನು ಪಾಲಿಸದೆ ಅಸಡ್ಡೆ ತೋರಿದ್ದಾರೆ ಎಂದು ಗುಡುಗಿದರು.
ತಹಶೀಲ್ದಾರ್ ಭಾಷಣದ ನಂತರ ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಎರಡು ಸಹ ಗಬ್ಬೆದು ಹೋಗಿದೆ, ಶಾಸಕರು ಬಂದ್ರೆ ಮಾತ್ರರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸೋದಾ…? ಇಲ್ಲವಾದ್ರೆ ಎಲ್ಲವೂ ಅವ್ಯವಸ್ಥೆನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸುತ್ತೋಲೆಯಂತೆ ರಾಜ್ಯೋತ್ಸವ ಕಾರ್ಯಕ್ರಮ ನಡೆದಿಲ್ಲ, 50ನೇ ವರ್ಷದ ಸಂಭ್ರಮದ ರಾಜ್ಯೋತ್ಸವದ ಸಾಧನೆಯೆಂದರೆ 567 ಕನ್ನಡ ಸರ್ಕಾರಿ ಶಾಲೆಗಳು ಮುಚ್ಚಿರುವುದೇ ಕನ್ನಡ ರಾಜ್ಯೋತ್ಸವಕ್ಕೆ ನೀಡಿರುವುದೇ ಸರ್ಕಾರದ ಕೊಡುಗೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಅತ್ತ ಶಾಸಕಾಂಗ ಕೆಲಸ ಮಾಡ್ತಿಲ್ಲ, ಇತ್ತ ಕಾರ್ಯಾಂಗ ಕೆಲಸ ಮಾಡ್ತಿಲ್ಲ ಎಂದು ಸರ್ಕಾರ ಮತ್ತು ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….