ದೊಡ್ಡಬಳ್ಳಾಪುರ, (ನ.01); ಮಹನೀಯರು ನಾಡು ನುಡಿಗೆ ನೀಡಿದ ಕೊಡುಗೆಯನ್ನು ನೆನೆದು ಗೌರವಿಸುವುದು ಎಲ್ಲಾ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶ್ರೀರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ವಿಜಯಕುಮಾರ್ ತಿಳಿಸಿದರು.
ನಗರದ ಶ್ರೀ ಸೂರ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡದ ಏಳಿಗೆಗಾಗಿ ಹಲವಾರು ಮಂದಿ ತಮ್ಮ ತನು ಮನ ಗಳನ್ನು ಅರ್ಪಿಸಿ ಕನ್ನಡದ ಕೀರ್ತಿ ಅಜರಾಮರವಾಗುವಂತೆ ಮಾಡಿದ್ದಾರೆ ಅವರ ಆ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಾ ಅವರುಗಳ ಮಾರ್ಗದರ್ಶನದಲ್ಲಿ ನಾವು ಕೂಡ ನಡೆದು ನಾಡಿಗೆ ಹಾಗೂ ಸಮಾಜಕ್ಕೆ ಒಳಿತನ್ನುಂಟು ಮಾಡಬೇಕು. ಇದರಿಂದ ನಮ್ಮ ಗೌರವ ಕೂಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷ ಮುದ್ದಪ್ಪ ಮಾತನಾಡಿ, ಇಂದು ನಾವು ನೆಮ್ಮದಿಯಿಂದ ಬಾಳಬೇಕಾದರೆ ಇದರ ಹಿಂದೆ ಹಲವಾರು ಹೋರಾಟಗಾರರ ಶ್ರಮವಿದೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ನಾವು ನಮ್ಮತನವನ್ನು, ಸ್ವಾಭಿಮಾನವನ್ನು ಬಿಟ್ಟುಕೊಡದೆ ನಾಡು ನುಡಿಗಾಗಿ ಕಂಕಣ ಕಟ್ಟಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಬದೇವನಹಳ್ಳಿ ಮುನಿಯಪ್ಪ ಮಾತನಾಡಿ, ಸರ್ಕಾರದ ಧೋರಣೆಗಳ ಪರಿಣಾಮದಿಂದಾಗಿ ಇಂದು ನಾಡಿನ ಜನತೆಗೆ ಸಿಗಬೇಕಾದಂತ ಮೂಲ ಸೌಕರ್ಯಗಳು ಸಿಗದೇ ನಮ್ಮನ್ನು ವಂಚಿತರನ್ನಾಗಿ ಮಾಡುತ್ತಿವೆ. ಇವುಗಳು ಅನ್ಯ ರಾಜ್ಯದ ಪಾಲಾಗದಂತೆ ತಡೆಯಬೇಕಾದರೆ ಹೋರಾಟ ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡದ ಕಟ್ಟಾಳು ಚೌಡರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಾಂಶುಪಾಲರಾದ ಮಂಜುನಾಥ್ ಎಂ ಪಿ, ಗೌ.ರಾ.ರಾಮಮೂರ್ತಿ, ಅನಿಲ್ ಕುಮಾರ್ ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….